ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ವಿಶ್ವರೂಪಂ ವಿವಾದ: ತನಿಖೆಗೆ ಮುಂದಾದ ಸಿಸಿಐ

Mainashree
Updated On : 1 Mar 2013, 5:53 am

ಚೆನೈ: ವಿಶ್ವರೂಪಂ ಚಿತ್ರ ಬಿಡಗಡೆ ಸಂಬಂಧ ನಟ ಕಮಲ್ ಹಾಸನ್ ಮತ್ತು ತಮಿಳುನಾಡು ಚಿತ್ರಮಂದಿರಗಳ ಮಾಲಿಕರ ನಡುವೆ ಉಂಟಾಗಿರುವ ವಿವಾದಗಳ ಬಗ್ಗೆ ಕಾಂಪಿಟಿಶನ್ ಕಮಿಶನ್ ಆಫ್ ಇಂಡಿಯಾ (ಸಿಸಿಐ) ತನಿಖೆ ಆರಂಭಿಸಿದೆ.

ವಿಶ್ವರೂಪಂ ಚಿತ್ರ ಪ್ರದರ್ಶನಕ್ಕೆ ಚಿತ್ರಮಂದಿರದ ಮಾಲಿಕರು ತೋರಿಸಿದ ನಿರ್ಲಕ್ಷದ ಬಗ್ಗೆ ನಟ ಕಮಲ ಹಾಸನ್ ಅವರು ಸಿಸಿಐನಲ್ಲಿ ದೂರು ದಾಖಲಿಸಿದ್ದರು. ಚಿತ್ರಮಂದಿರದ ಮಾಲಿಕರ ಸಂಘದ ವಿರುದ್ಧ ದೂರು ದಾಖಲಿಸಿದ ಹಾಸನ್, ಚಿತ್ರಮಂದಿರಗಳ ಮಾಲಿಕರು ಸ್ಫರ್ಧಾನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ದೂರಿದ್ದರು.

ಡಿಟಿಎಸ್ ಪ್ಲಾಟ್‌ಫಾರ್ಮ್ ಮುಖಾಂತರ ಚಿತ್ರ ಪ್ರದರ್ಶನ ಮಾಡಲು ಕಮಲ್ ಹಾಸನ್ ನಿರ್ಧರಿಸಿದ್ದರು. ಈ ಹಿನ್ನಲೆಯಲ್ಲಿ ಚಿತ್ರಮಂದಿರದ ಮಾಲಿಕರು ಕಮಲ್ ಹಾಸನ್ ಅವರ ವಿಶ್ವರೂಪಂ ಸೇರಿದಂತೆ ಯಾವುದೇ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಬಾರದು ಎಂದು ನಿರ್ಧರಿಸಿದ್ದರು.

ಈ ಸಂಬಂಧ ಸಿಸಿಐನ ಪ್ರಧಾನ ನಿರ್ದೇಶಕರು ಅಧಿಕಾರಿಗಳಿಗೆ 60 ದಿನದೊಳಗೆ ತನಿಖೆ ಪೂರ್ಣಗೊಳಿಸುವಂತೆ ಆದೇಶಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement