ದುನಿಯಾ ದಾಂಪತ್ಯದಲ್ಲಿ ಬಿರುಕು: ಡೈವೋರ್ಸ್ಗೆ ಅರ್ಜಿ
ಬೆಂಗಳೂರು: ಸ್ಯಾಂಡಲ್ವುಡ್ನ ಖ್ಯಾತ ನಟ ದುನಿಯಾ ವಿಜಯ್ ಅವರ ದಾಂಪತ್ಯ ಜೀವನ ಮುರಿದು ಬಿದ್ದಿದೆ. ವಿಜಯ್ ಅವರು ತಮ್ಮ ಪತ್ನಿ ನಾಗರತ್ನ ಅವರಿಂದ ವಿಚ್ಛೇದನ ಕೋರಿ ನಗರದ ಕೌಟುಂಬಿಕ ಕೋರ್ಟ್ನಲ್ಲಿ ಗುರುವಾರ ಅರ್ಜಿ ಸಲ್ಲಿಸಿದ್ದಾರೆ.
14 ವರ್ಷಗಳ ಹಿಂದೆ ವಿಜಯ್ ಅವರು ನಾಗರತ್ನ ಅವರನ್ನು ವಿವಾಹವಾಗಿದ್ದರು. ಅವರಿಗೆ ಮೂವರು ಮಕ್ಕಳಿದ್ದು, ಇದೀಗ ತಮ್ಮ ದಾಂಪತ್ಯ ಜೀವನದಲ್ಲಿ ಸಾಮರಸ್ಯ ಇಲ್ಲ ಎಂದು ಆರೋಪಿಸಿ ವಿಜಯ್ ಡೈವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ.
ತಮ್ಮ ವೃದ್ಧ ತಂದೆ, ತಾಯಿಯನ್ನು ಪತ್ನಿ ನಾಗರತ್ನ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ದುನಿಯಾ ವಿಜಯ್ ಅವರು ತಾವು ಸಲ್ಲಿಸಿರುವ ಡೈವೋರ್ಸ್ ಅರ್ಜಿಯಲ್ಲಿ ದೂರಿದ್ದಾರೆ.
ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯ್, ಪತ್ನಿಯಿಂದ ನನ್ನ ತಾಯಿಗೆ ಹಾಗೂ ನನಗೆ ತುಂಬಾ ಹಿಂಸೆಯಾಗುತ್ತಿದೆ. ಇದನ್ನು ಹೇಳಿಕೊಳ್ಳಲು ಕೋರ್ಟ್ ಮುಂದೆ ಬಂದಿರುವುದಾಗಿ ತಿಳಿಸಿದರು.