ಗಡ್ಕರಿ ಕಂಪನಿಯೊಂದಿಗೆ ಸಂಪರ್ಕ ಹೊಂದಿರುವ ಕಂಪನಿ ಮೇಲೆ ಐಟಿ ದಾಳಿ
ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿಯವರ ಕಂಪನಿಯೊಂದಿಗೆ ಸಂಪರ್ಕ ಹೊಂದಿರುವ 8 ಕಂಪನಿಗಳ ಮೇಲೆ...
ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿಯವರ ಕಂಪನಿಯೊಂದಿಗೆ ಸಂಪರ್ಕ ಹೊಂದಿರುವ 8 ಕಂಪನಿಗಳ ಮೇಲೆ ಮಂಗಳವಾರ ಆದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎರಡನೇ ಬಾರಿ ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಗಡ್ಕರಿಯವರ ನಾಮ ನಿರ್ದೇಶನವಾದ ಬೆನ್ನಲ್ಲೇ ಗಡ್ಕರಿಯವರ ಕಂಪನಿ ಮೇಲೆ ಐಟಿ ದಾಳಿ ನಡೆಸಿರುವುದು ಹೆಚ್ಚಿನ ಕುತೂಹಲಕ್ಕೆಡೆ ಮಾಡಿದೆ.
2010ರಲ್ಲಿ ಪುರ್ತಿ ಗ್ರೂಪ್‌ನ ಚೇರ್‌ಮೆನ್ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿರುವ ಗಡ್ಕರಿಯವರಿಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದಿತ್ತು. ಹೆಚ್ಚಿನ ವಿಚಾರಣೆಗಾಗಿ ಹಾಜರಾಗಬೇಕೆಂದು ಗಡ್ಕರಿಗೆ ಸಮನ್ಸ್ ಕಳುಹಿಸಿದ್ದರೂ, ಫೆ.1ನೇ ತಾರೀಖಿನವರೆಗೆ ತನಗೆ ವಿಚಾರಣೆಗೆ ಬರಲು ಸಾಧ್ಯವಿಲ್ಲ ಎಂದು ಗಡ್ಕರಿ ಹೇಳಿದ್ದರು.
ಗಡ್ಕರಿಯವರ ಪುರ್ತಿ ಗ್ರೂಪ್ ಜತೆ ಸಂಪರ್ಕವಿರುವ ಎಲ್ಲ ಕಂಪನಿಗಳ ಮೇಲೆ ಹಾಗು ಅದರಲ್ಲಿ ಬಂಡವಾಳ ಹೂಡಿರುವ ಕಂಪನಿಗಳ ಮೇಲೂ ಮಂಗಳವಾರ ಐಟಿ ದಾಳಿ ನಡೆಸಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷರನ್ನಾಗಿ ಗಡ್ಕರಿಯವರೇ ಮುಂದುವರಿಯಬೇಕೆಂದು ಆರ್‌ಎಸ್ಸೆಸ್ಸ್ ಆಗ್ರಹಿಸಿದ್ದು, ಏತನ್ಮಧ್ಯೆ, ಗಡ್ಕರಿ ಮುಂದುವರಿಯುವುದಕ್ಕೆ ಎಲ್. ಕೆ. ಆಡ್ವಾಣಿ ಅಸಮಧಾನ ವ್ಯಕ್ತ ಪಡಿಸಿದ್ದಾರೆ.