ನಾಳೆ 25 ಶಾಸಕರಿಂದ ರಾಜಿನಾಮೆ
ಬಿಜೆಪಿ ಬಿಟ್ಟು ಕೆಜೆಪಿ ಸೇರಲು ನಿರ್ಧರಿಸಿರುವ 25 ಶಾಸಕರು ನಾಳೆ (ಬುಧವಾರ) ರಾಜಿನಾಮೆ ಸಲ್ಲಿಸಲಿದ್ದಾರೆ. ಈ ಬಗ್ಗೆ ಹಾವೇರಿಯಲ್ಲಿ ಹೇಳಿಕೆ ನೀಡಿದ ....
ಬೆಂಗಳೂರು: ಬಿಜೆಪಿ ಬಿಟ್ಟು ಕೆಜೆಪಿ ಸೇರಲು ನಿರ್ಧರಿಸಿರುವ 25 ಶಾಸಕರು ನಾಳೆ (ಬುಧವಾರ) ರಾಜಿನಾಮೆ ಸಲ್ಲಿಸಲಿದ್ದಾರೆ. ಈ ಬಗ್ಗೆ ಹಾವೇರಿಯಲ್ಲಿ ಹೇಳಿಕೆ ನೀಡಿದ ಶಾಸಕ ನೆಹರು ಓಲೇಕಾರ್ ನಾಳೆಯೇ ಸರ್ಕಾರ ಬಹುತೇಕ ಪತನವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ನಾಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದಲ್ಲಿ ಉಪಹಾರ ಕೂಟ ನಡೆಯಲಿದ್ದು, ಇದಾದ ನಂತರ ಮಧ್ಯಾಹ್ನ 1.30ಕ್ಕೆ ಸ್ಪೀಕರ್ನ್ನು ಭೇಟಿ ಮಾಡಿ ಬಿಜೆಪಿಯ 25 ಶಾಸಕರು ರಾಜಿನಾಮೆ ನೀಡಲಿದ್ದಾರೆ. ಒಂದು ವೇಳೆ ಸ್ಪೀಕರ್ ಭೇಟಿ ಸಾಧ್ಯವಾಗದೇ ಇದ್ದರೆ ತಾವು ರಾಜ್ಯಪಾಲರಿಗೆ ರಾಜಿನಾಮೆ ನೀಡುವುದಾಗಿ ಓಲೇಕಾರ್ ಹೇಳಿದ್ದಾರೆ.
ಅದೇ ವೇಳೆ ನಾಳೆಯೇ ನಾಲ್ವರು ಸಚಿವರುಗಳಾದ ರೇಣುಕಾಚಾರ್ಯ, ಉದಾಸಿ, ಶೋಭಾ, ನಿರಾಣಿ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರ ನಡೆಯಲಿದ್ದಾರೆ.
ಅಂತೂ ಶೆಟ್ಟರ್ ಸರ್ಕಾರವನ್ನು ಬೀಳಿಸಲು ಬಿಎಸ್ವೈ ತಂತ್ರ ಹೂಡಿದ್ದು, ಬಿಜೆಪಿಯ ಶಾಸಕರು ಹಂತ ಹಂತವಾಗಿ ರಾಜಿನಾಮೆ ಕೊಟ್ಟು ಕೆಜೆಪಿ ಸೇರುವಂತೆ ಮಾಡುತ್ತಿದ್ದಾರೆ.