ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಿಜೆಪಿ ರಾಷ್ಟ್ರಾಧ್ಯಕ್ಷ ಚುನಾವಣೆ: ಗಡ್ಕರಿ ವಿರುದ್ಧ ಯಶ್ವಂತ್ ಸಿನ್ಹಾ ಸ್ಪರ್ಧೆ?

ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಚುನಾವಣೆಯ ಬಿಸಿಯೇರುತ್ತಿದೆ. ಈವರೆಗೆ ಗಡ್ಕರಿಯವರನ್ನೇ ಬಿಜೆಪಿ ರಾಷ್ಟ್ರಾಧ್ಯಕ್ಷರನ್ನಾಗಿ ಮುಂದುವರಿಸಲಾಗುವುದು ಎಂಬ ಸುದ್ದಿ ಕೇಳಿ...

Rashmi Kasaragodu
Updated On : 22 Jan 2013, 7:16 am

ನವದೆಹಲಿ: ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಚುನಾವಣೆಯ ಬಿಸಿಯೇರುತ್ತಿದೆ. ಈವರೆಗೆ ಗಡ್ಕರಿಯವರನ್ನೇ ಬಿಜೆಪಿ ರಾಷ್ಟ್ರಾಧ್ಯಕ್ಷರನ್ನಾಗಿ ಮುಂದುವರಿಸಲಾಗುವುದು ಎಂಬ ಸುದ್ದಿ ಕೇಳಿಬರುತ್ತಿತ್ತು. ಆದರೆ ಇದೀಗ ಬಿಜೆಪಿಯ ಹಿರಿಯ ನಾಯಕ ಯಶ್ವಂತ್ ಸಿನ್ಹಾ ಅವರು ಗಡ್ಕರಿ ವಿರುದ್ಧ ಸ್ಪರ್ಧೆಗಿಳಿಯಲಿದ್ದಾರೆ ಎಂಬ ಸುದ್ದಿ ಸ್ಫೋಟಗೊಂಡಿದೆ.

ಬಲ್ಲಮೂಲಗಳ ಪ್ರಕಾರ ಯಶ್ವಂತ್ ಸಿನ್ಹಾ ಅವರು ಮಂಗಳವಾರ ಬಿಜೆಪಿ ಪ್ರಧಾನ ಕಚೇರಿಯಿಂದ ನಾಮಪತ್ರವನ್ನು ತೆಗೆದುಕೊಂಡು ಹೋಗಿದ್ದಾರೆ. ಆದಾಗ್ಯೂ, ಈ ವಿಷಯದ ಬಗ್ಗೆ ಸಿನ್ಹಾ ಅವರ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆಗಳು ಹೊರಬಂದಿಲ್ಲ.

 ಜನವರಿ 23ರಂದು ಮುಂಬೈಯಲ್ಲಿ ಚುನಾವಣೆ ನಡೆಯಲಿದ್ದು, ಪಕ್ಷದ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಬಿಜೆಪಿ ಪಕ್ಷ ರಾಷ್ಟ್ರಾಧ್ಯಕ್ಷರ ಚುನಾವಣೆ ವೇಳೆಗೆ ಎರಡು ತಂಡಗಳಾಗಿ ಕವಲೊಡೆಯುವ ಪರಿಸ್ಥಿತಿ ಕಂಡುಬರುತ್ತಿದೆ.

ಬಿಜೆಪಿಯ ಕೆಲವೊಂದು ನಾಯಕರು ಗಡ್ಕರಿಯವರು ರಾಷ್ಟ್ರಾಧ್ಯಕ್ಷರಾಗಿ ಮುಂದುವರಿಯುವುದಕ್ಕೆ ವಿರೋಧ ಸೂಚಿಸಿದ್ದಾರೆ. ಈ ಹಿಂದೆ ಹಿರಿಯ ನಾಯಕರಾದ ಯಶ್ವಂತ್ ಸಿನ್ಹಾ, ಜಸ್ವಂತ್ ಸಿಂಗ್, ಶತ್ರುಘ್ನ ಸಿನ್ಹಾ ಮತ್ತು ರಾಮ್ ಜೇಠ್ಮಲಾನಿ ಗಡ್ಕರಿಯವರನ್ನು ಬಹಿರಂಗವಾಗಿಯೇ ಟೀಕಿಸಿದ್ದಾರೆ.

ಆದಾಗ್ಯೂ, ಗಡ್ಕರಿ ವಿರುದ್ಧ ಯಾರೊಬ್ಬರೂ ಕಣಕ್ಕಿಳಿಯದೇ ಇದ್ದರೆ ನಾನೇ ಗಡ್ಕರಿ ವಿರುದ್ಧ ಸ್ಪರ್ಧಿಸುತ್ತೇನೆ ಎಂದು ಖ್ಯಾತ ನ್ಯಾಯವಾದಿ ಮಹೇಶ್ ಜೇಠ್ಮಲಾನಿ ನಿನ್ನೆ ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement