ಮಹಿಳಾ ಬೆಂಬಲಿಗರಿಗೆ 'ಕತ್ತಿ' ನೀಡಲು ಶಿವಸೇನೆ ನಿರ್ಧಾರ
ಸೆಂಟ್ರಲ್ ಮುಂಬೈಯ ಲಾಲ್‌ಬಾಗ್‌ನಲ್ಲಿ ಇತ್ತೀಚೆಗೆ ನಿಧನರಾದ ಶಿವಸೇನಾ ಮುಖ್ಯಸ್ಥ ಭಾಳಾ ಠಾಕ್ರೆ ಅವರ...
ಮುಂಬೈ: ಸೆಂಟ್ರಲ್ ಮುಂಬೈಯ ಲಾಲ್‌ಬಾಗ್‌ನಲ್ಲಿ ಇತ್ತೀಚೆಗೆ ನಿಧನರಾದ ಶಿವಸೇನಾ ಮುಖ್ಯಸ್ಥ ಭಾಳಾ ಠಾಕ್ರೆ ಅವರ ಜನ್ಮದಿನಾಚರಣೆ ಆಚರಿಸಲು ಅದ್ದೂರಿ ತಯಾರಿ ನಡೆದು ಬರುತ್ತಿದೆ.
ನಾಳೆ ಭಾಳಾ ಠಾಕ್ರೆ ಅವರ ಹುಟ್ಟುಹಬ್ಬ ಆಚರಣೆಗೆ ಶಿವಸೇನೆ ತಯಾರಿ ನಡೆಸಿದ್ದು, ಈ ವೇಳೆ ಮಹಿಳಾ ಬೆಂಬಲಿಗರಿಗೆ ಶಿವಸೇನೆ ಕತ್ತಿಯನ್ನು ವಿತರಿಸಲಿದೆ. ಇಲ್ಲಿನ ಗಣೇಶ್ ಗಲ್ಲಿಯಲ್ಲಿ ಭಾಳಾ ಹುಟ್ಟುಹಬ್ಬದ ತಯಾರಿ ನಡೆಸುತ್ತಿರುವ ಶಿವಸೇನೆಯ ಕಾರ್ಯಕರ್ತ ಸದಾಶಿವ್, ಠಾಕ್ರೆಯವರ ಹುಟ್ಟುಹಬ್ಬ ಆಚರಣೆಯಲ್ಲಿ ಸುಮಾರು 3000 ಮಹಿಳೆಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಈ ಎಲ್ಲ ಮಹಿಳೆಯರಿಗೂ ನಾವು ಕತ್ತಿ ವಿತರಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಭಾಳಾ ಠಾಕ್ರೆಯವರು ಮಹಿಳೆಯರು ತಮ್ಮ ಪರ್ಸ್‌ನಲ್ಲಿ ಲಿಪ್‌ಸ್ಟಿಕ್ ಇಟ್ಟುಕೊಳ್ಳುವ ಬದಲು ರಾಮ್‌ಪುರಿ (ಒಂದು ವಿಧದ ಕತ್ತಿ) ಇಟ್ಟುಕೊಳ್ಳುವುದು ಒಳ್ಳೆಯದು ಎಂದು ಹೇಳುತ್ತಿದ್ದರು. ಆದಾಗ್ಯೂ, ಕೇಂದ್ರ ಸರ್ಕಾರ ಮಹಿಳೆಯರಿಗೆ ಭದ್ರತೆ ಒದಗಿಸುವಲ್ಲಿ ಅಸಫಲವಾಗಿದೆ. ಆದ್ದರಿಂದಲೇ ನಾವು ಮಹಿಳೆಯರಿಗೆ ಕತ್ತಿ ವಿತರಿಸುವ ಮೂಲಕ ಅವರನ್ನು ಸಬಲೆಯರನ್ನಾಗಿ ಮಾಡುತ್ತೇವೆ ಎಂದು ಶಿವಸೇನೆಯ ದಕ್ಷಿಣ ಪ್ರದೇಶದ ಮುಖ್ಯಸ್ಥ ಅಜಯ್ ಚೌಧರಿ ಹೇಳಿದ್ದಾರೆ.
ಮೂರು ಇಂಚಿನ ಬ್ಲೇಡ್ ಹೊಂದಿರುವ ಚೈನೀಸ್ ಕತ್ತಿಗಳನ್ನು ಶಿವಸೇನೆ ಮಹಿಳೆಯರಿಗೆ ವಿತರಿಸಲಿದೆ.