ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಯುಪಿಎ ನನ್ನ ಮೇಲೆ ಅಪವಾದ ಹೊರಿಸಲು ಯತ್ನಿಸುತ್ತಿದೆ: ಗಡ್ಕರಿ

ಗಡ್ಕರಿಯವರ ಪುರ್ತಿ ಗ್ರೂಪ್ ಸಂಪರ್ಕದಲ್ಲಿರುವ ಕಂಪನಿಗಳ ಮೇಲೆ ಮಂಗಳವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ....

Rashmi Kasaragodu
Updated On : 22 Jan 2013, 7:02 am

ನವದೆಹಲಿ: ಗಡ್ಕರಿಯವರ ಪುರ್ತಿ ಗ್ರೂಪ್ ಸಂಪರ್ಕದಲ್ಲಿರುವ ಕಂಪನಿಗಳ ಮೇಲೆ ಮಂಗಳವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯುಪಿಎ ತಮ್ಮ ಮೇಲೆ ಅಪವಾದ ಹೊರಿಸಲು ಯತ್ನಿಸುತ್ತಿದೆ ಎಂದಿದ್ದಾರೆ.

ತಮ್ಮ ಬಗ್ಗೆಯಿರುವ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಒಂದು ವೇಳೆ ತಾವು ತಪ್ಪಿತಸ್ಥ ಎಂದು ಸಾಬೀತಾದರೆ ತಮ್ಮ ಸ್ಥಾನ ಬಿಟ್ಟು ಹೊರ ನಡೆಯುವುದಕ್ಕೆ ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಆದಾಗ್ಯೂ, ತನ್ನ ರಾಜಕೀಯ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಈ ರೀತಿಯ ವಿವಾದಗಳನ್ನು ಮಾಡಲಾಗುತ್ತಿದೆ ಎಂದು ಗಡ್ಕರಿ ಆರೋಪಿಸಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಮತ್ತೊಮ್ಮೆ ಆಯ್ಕೆಯಾಗಲು ಸಿದ್ಧವಾಗಿರುವ ಬೆನ್ನಲ್ಲೇ ಐಟಿ ದಾಳಿ ನಡೆಸಿರುವುದು ಯುಪಿಎ ಹೆಣೆದ ಕುತಂತ್ರ ಎಂದು  ಅವರು ಹೇಳಿದ್ದಾರೆ.


ಏತನ್ಮಧ್ಯೆ, ತಮ್ಮ ಕಂಪನಿ ಮೇಲೆ ಯಾವುದೇ ಐಟಿ ದಾಳಿ ನಡೆದಿಲ್ಲ, ಐಟಿ ಅಧಿಕಾರಿಗಳು ಪುರ್ತಿ ಕಂಪನಿಯಲ್ಲಿ ಬಂಡವಾಳ ಹೂಡಿರುವ ಕಂಪನಿಗಳ ಸಮೀಕ್ಷೆ ನಡೆಸಲು ಬಂದಿದ್ದಾರೆ ಎಂದು ಪುರ್ತಿ ಗ್ರೂಪ್ ಹೇಳಿಕೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement