ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

26/11 ಸಾಮೂಹಿಕ ಹತ್ಯಾಕಾಂಡದಲ್ಲಿ ಹೆಡ್ಲಿ ಪ್ರಧಾನ ಪಾತ್ರ ವಹಿಸಿದ್ದ: ಅಮೆರಿಕ

2008ರಲ್ಲಿ ಮುಂಬೈಯಲ್ಲಿ ನಡೆದ ಭಯೋತ್ಪಾದನಾ ಕೃತ್ಯದಲ್ಲಿ ಪಾಕಿಸ್ತಾನ-ಅಮೆರಿಕ ಮೂಲದ ಉಗ್ರ ಡೇವಿಡ್ ಹೆಡ್ಲಿ ಪ್ರಮುಖ ಪಾತ್ರವಹಿಸಿದ್ದನು. ಈ ಸಾಮೂಹಿಕ ಹತ್ಯಾಕಾಂಡದಲ್ಲಿ ಹೆಡ್ಲಿ...

Rashmi Kasaragodu
Updated On : 23 Jan 2013, 4:36 am

ವಾಷಿಂಗ್ಟನ್: 2008ರಲ್ಲಿ ಮುಂಬೈಯಲ್ಲಿ ನಡೆದ ಭಯೋತ್ಪಾದನಾ ಕೃತ್ಯದಲ್ಲಿ ಪಾಕಿಸ್ತಾನ-ಅಮೆರಿಕ ಮೂಲದ ಉಗ್ರ ಡೇವಿಡ್ ಹೆಡ್ಲಿ ಪ್ರಮುಖ ಪಾತ್ರವಹಿಸಿದ್ದನು. ಈ ಸಾಮೂಹಿಕ ಹತ್ಯಾಕಾಂಡದಲ್ಲಿ ಹೆಡ್ಲಿ ಕೈವಾಡ ಪ್ರಶ್ನಾತೀತ ಎಂದು ಅಮೆರಿಕ ಹೇಳಿದೆ.

ಚಿಕಾಗೋ ನ್ಯಾಯಾಲಯದಲ್ಲಿ ಹೆಡ್ಲಿಯನ್ನು ಹಾಜರು ಪಡಿಸಿದ ಅಮೆರಿಕ ಸರ್ಕಾರ, ಮುಂಬೈಯ ಯಾವ ಪ್ರದೇಶಗಳಲ್ಲಿ ಉಗ್ರ ದಾಳಿ ನಡೆಸಬೇಕು ಎಂಬುದರ ಯೋಜನೆಯ ಬಗ್ಗೆಯಿರುವ ವೀಡಿಯೋವನ್ನು ಹೆಡ್ಲಿ ಗುಪ್ತಚರ ಇಲಾಖೆಗೆ ಸಲ್ಲಿಸಿರುವುದಾಗಿ ಹೇಳಿದೆ.

ಅದೇ ವೇಳೆ ಮುಂಬೈಗೆ ಹೇಗೆ ನುಗ್ಗಬೇಕು, ದಾಳಿ ನಡೆಸಿದ ನಂತರ ಹೇಗೆ ಅಲ್ಲಿಂದ ಪರಾರಿಯಾಗಬೇಕು ಎಂಬೆಲ್ಲಾ ತಂತ್ರಗಳನ್ನು ಉಗ್ರರು ಹೇಗೆ ಬಳಸಿಕೊಂಡರು ಎಂಬುದರ ಬಗ್ಗೆ ಹೆಡ್ಲಿ ಗುಪ್ತಚರ ಇಲಾಖೆಯವರಿಗೆ ಹೇಳಿದ್ದಾನೆ.

ಈ ಭಯೋತ್ಪಾದನಾ ಕೃತ್ಯದಲ್ಲಿ ಹೆಡ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದ್ದಾನೆ. ಸಾಮೂಹಿಕ ಹತ್ಯಾಕಾಂಡದಲ್ಲಿ ಆತನ ಪಾಲು ಪ್ರಶ್ನಾತೀತ ಎಂದು ಅಮೆರಿಕ ಸರ್ಕಾರ ಚಿಕಾಗೋ ನ್ಯಾಯಾಲಯದಲ್ಲಿ ಹೇಳಿದೆ.

ಅಮೆರಿಕದ ಅಟರ್ನಿ ಗ್ಯಾರಿ ಎಸ್ ಶಾಪಿರೊ ಪ್ರಕಾರ  2002ರಿಂದ 2005ರ ಅವಧಿಯಲ್ಲಿ ಹೆಡ್ಲಿ 5 ಪ್ರತ್ಯೇಕ ಲಷ್ಕರೆ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾನೆ. ಅದರಲ್ಲಿ ಆತ ಜಿಹಾದ್ ಹಾಗು ಯುದ್ಧ ಕಲೆಗಳನ್ನು ಅಭ್ಯಾಸ ಮಾಡಿದ್ದಾನೆ.

ಅದ್ಯಾವಾಗ ಹೆಡ್ಲಿ ಉಗ್ರ ದಾಳಿ ನಡೆಸಲು ಸಮರ್ಥ ಎಂದು ಲಷ್ಕರೆ ನಾಯಕರಿಗೆ ಗೊತ್ತಾಯಿತೋ, ಆವಾಗ ಆತನ ಹೆಸರನ್ನು ಬದಲಿಸಿ ಮುಂಬೈಗೆ ಕಳುಹಿಸಲಾಯಿತು.

ಏತನ್ಮಧ್ಯೆ, ಮುಂಬೈ  ದಾಳಿಗೆ ಮುನ್ನ ಲಷ್ಕರೆ ನಾಯಕರು ಹೆಡ್ಲಿಯನ್ನು ಡೆನ್ಮಾರ್ಕ್ಗೆ ಕರೆಸಿಕೊಂಡಿದ್ದು, ಅಲ್ಲಿ ಇನ್ನೊಂದು ದಾಳಿ ನಡೆಸಲು ತಂತ್ರ ಹೂಡಲಾಗಿತ್ತು ಎಂದು ಶಾಪಿರೋ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement