ತಿಹಾರ್ ಜೈಲಿನಲ್ಲಿ ಅಜಯ್ ಚೌಟಾಲ ಬಿಸ್ಕೆಟ್ ತಯಾರಿ
ನವದೆಹಲಿ: 2000 ಇಸವಿಯಲ್ಲಿ ನಡೆದ ಶಿಕ್ಷಕರ ನೇಮಕಾತಿ ಹಗರಣದಲ್ಲಿ 10 ವರ್ಷ ಜೈಲು ಶಿಕ್ಷೆಗೊಳಪಟ್ಟಿರುವ ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಅವರ ಪುತ್ರ ಐಎನ್‌ಎಲ್‌ಡಿ ನಾಯಕ ಅಜಯ್ ಚೌಟಾಲ ತಿಹಾರ್ ಜೈಲಿನಲ್ಲಿ ಬಿಸ್ಕೆಟ್ ತಯಾರಿಸಲಿದ್ದಾರೆ.
ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಜಯ್ ಚೌಟಾಲ ಜೈಲಿನಲ್ಲಿರುವ ಇತರ ಖೈದಿಗಳೊಂದಿಗೆ ತಿಹಾರ್ ಫ್ಯಾಕ್ಟರಿಯಲ್ಲಿ ಬಿಸ್ಕೆಟ್ ತಯಾರಿ ಕಾರ್ಯದಲ್ಲಿ ನೆರವಾಗಲಿದ್ದಾರೆ ಎಂದು ಬಲ್ಲಮೂಲಗಳು ಹೇಳಿವೆ.
ಚೌಟಾಲಾ ಅವರು ಬೇಕರಿಯಲ್ಲಿ ಕೆಲಸ ಮಾಡಲಿದ್ದು, ಅಲ್ಲಿ ಬಿಸ್ಕೆಟ್, ನಮ್ಕೀನ್ ಮೊದಲಾದ ತಿಂಡಿಗಳನ್ನು ತಯಾರಿಸಲಿದ್ದಾರೆ.
ಜೈಲು ಅಧಿಕಾರಿಗಳು ಚೌಟಾಲ ಅವರನ್ನು ಮೊದಲು ವೈದ್ಯಕೀಯ ಪರೀಕ್ಷೆಗೊಳಪಡಿಸಿ, ಅವರು ಕೆಲಸ ಮಾಡಲು ಸಮರ್ಥರು ಎಂದು ವೈದ್ಯರು ನಿರ್ಧರಿಸಿದ ನಂತರವೇ ಬೇಕರಿಯಲ್ಲಿ ಕೆಲಸ ಮಾಡಲು ಅನುಮತಿ ನೀಡಲಾಗುವುದು.
ಏತನ್ಮಧ್ಯೆ, ವಿಚಾರಣೆ ಬಾಕಿ ಇರುವುದರಿಂದ ಚೌಟಾಲ ಅವರನ್ನು ಜೈಲ್ ನಂ.4ರಲ್ಲಿರಿಸಲಾಗಿದೆ.