ನಾನು ಪಾಸಿಟಿವ್ ರಾಜಕಾರಣದತ್ತ ಗಮನ ಹರಿಸುತ್ತೇನೆ: ರಾಹುಲ್
ನಾನು ನೆಗೆಟಿವ್ ರಾಜಕಾರಣದಿಂದ ದೂರವಿದ್ದು ಪಾಸಿಟಿವ್ ರಾಜಕಾರಣದತ್ತ ಗಮನ ಹರಿಸುತ್ತೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ...
ನವದೆಹಲಿ: ನಾನು ನೆಗೆಟಿವ್ ರಾಜಕಾರಣದಿಂದ ದೂರವಿದ್ದು ಪಾಸಿಟಿವ್ ರಾಜಕಾರಣದತ್ತ ಗಮನ ಹರಿಸುತ್ತೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಅತ್ಯಾಚಾರದ ನೂತನ ನಿಯಮದ ಬಗ್ಗೆ ನ್ಯಾಯಮೂರ್ತಿ ವರ್ಮಾ ಸಮಿತಿಯ ಬಗ್ಗೆ ನಿಮ್ಮ ಸಲಹೆಯೇನು? ಎಂಬ ಪ್ರಶ್ನೆಯನ್ನು ಕೇಳಿದಾಗ, ಇವತ್ತು ಕಚೇರಿಯಲ್ಲಿ ನನ್ನ ಮೊದಲನೇ ದಿನವಾಗಿತ್ತು. ಕೆಲವೊಂದು ನಿರ್ದಿಷ್ಟ ವಿಷಯಗಳ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ ಎಂದು ರಾಹುಲ್ ಉತ್ತರಿಸಿದ್ದಾರೆ.
ಆದಾಗ್ಯೂ, ತಾನು ದೇಶದ ಅಭಿವ್ಛದ್ಧಿಗಾಗಿ ಕಾಂಗ್ರೆಸ್ನ್ನು ಮುನ್ನಡೆಸಲು ಬಯಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ದೇಶದ ರಾಜಕೀಯದ ಬಗ್ಗೆ ಮಾತನಾಡಿದ ರಾಹುಲ್, ನಮ್ಮ ರಾಜಕಾರಣ ಮುನಿಸಿನದ್ದು, ನಾವು ನಮ್ಮೊಳಗೇ ಕಚ್ಚಾಡುತ್ತಿರುತ್ತೇವೆ. ಅದು ಕಡಿಮೆಯಾಗಬೇಕು. ನಾನು ನೆಗೆಟಿವ್ ರಾಜಕಾರಣ ಮಾಡಲು ಬಯಸುವುದಿಲ್ಲ. ನನ್ನದೇನಿದ್ದರೂ ಪಾಸಿಟಿವ್ ರಾಜಕಾರಣ. ಇದೇ ರಾಷ್ಟ್ರವನ್ನು ಅಭಿವೃದ್ಧಿಯೆಡೆಗೆ ಸಾಗಿಸುತ್ತದೆ. ನಮ್ಮದು ಪ್ರಗತಿಶೀಲ ರಾಷ್ಟ್ರ, ನಾವಿದನ್ನು ಅಭಿವೃದ್ಧಿಪಡಿಸಬೇಕಾಗಿದೆ ಎಂದಿದ್ದಾರೆ.
ಅದೇ ವೇಳೆ ರಾಷ್ಟ್ರದ ಪ್ರಗತಿಗಾಗಿ ನಾವು ಯುವಜನಾಂಗದತ್ತ ದೃಷ್ಟಿ ನೆಡಬೇಕಾಗಿದೆ ಎಂದು ರಾಹುಲ್ ಹೇಳಿದ್ದಾರೆ.