ಬಿಎಸ್‌ವೈ ಕೈಗೆ 12 ಶಾಸಕರ ರಾಜಿನಾಮೆ
ಆಡಳಿತರೂಢ ಬಿಜೆಪಿಗೆ ಕೆಜೆಪಿ ಗಂಡಾಂತರ ಎದುರಾಗಿದ್ದು, ಕೆಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ....
ಬೆಂಗಳೂರು: ಆಡಳಿತರೂಢ ಬಿಜೆಪಿಗೆ ಕೆಜೆಪಿ ಗಂಡಾಂತರ ಎದುರಾಗಿದ್ದು, ಕೆಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೈಗೆ ಬಿಜೆಪಿಯ 12 ಶಾಸಕರು ರಾಜಿನಾಮೆ ಪತ್ರ ನೀಡಿದ್ದಾರೆ.
ಇಬ್ಬರು ಸಚಿವರು ಸೇರಿದಂತೆ 12 ಶಾಸಕರು ಇಂದು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ರಾಜಿನಾಮೆ ಪತ್ರಗಳನ್ನು ತಮ್ಮ ನಾಯಕ ಯಡಿಯೂರಪ್ಪ ಅವರಿಗೆ ನೀಡಿದ್ದಾರೆ.
ಯಡಿಯೂರಪ್ಪ ನೇತೃತ್ವದಲ್ಲಿ ಲೋಕೋಪಯೋಗಿ ಸಚಿವ ಸಿ.ಎಂ ಉದಾಸಿ ಅವರ ನಿವಾಸದಲ್ಲಿ ನಡೆದ ಉಪಹಾರ ಸಭೆಯಲ್ಲಿ ಭಾಗವಹಿಸಿದ್ದ ಹರಿಹರ ಶಾಸಕ ಬಿ.ಪಿ.ಹರೀಶ್, ಸೊರಬ ಶಾಸಕ ಹರತಾಳು ಹಾಲಪ್ಪ, ಬಸವಕಲ್ಯಾಣ ಶಾಸಕ ಬಸವರಾಜ್ ಪಾಟೀಲ್ ಅಟ್ಟೂರ್, ರಾಣೆಬೆನ್ನೂರ್ ಶಾಸಕ ಜಿ.ಶಿವಣ್ಣ, ಕುಂದಗೋಳ ಶಾಸಕ ಚಿಕ್ಕನಗೌಡರ್, ಚಳ್ಳಿಕೆರೆ ಶಾಸಕ ತಿಪ್ಪೇಸ್ವಾಮಿ, ಹೊಳಲ್ಕೆರೆ ಶಾಸಕ ಚಂದ್ರಪ್ಪ, ಯಲ್ಲಾಪುರ ಶಾಸಕ ವಿ.ಎಸ್ ಪಾಟೀಲ್ ಬ್ಯಾಡಗಿ ಶಾಸಕ ಸುರೇಶ್‌ಗೌಡ್ ಪಾಟೀಲ್ ಹಾಗೂ ತರೀಕೆರೆ ಶಾಸಕ ಸುರೇಶ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಈ ಮಧ್ಯೆ ಯಡಿಯೂರಪ್ಪ ಬೆಂಬಲಿಗ ಶಾಸಕರ ರಾಜಿನಾಮೆ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು, ರಾಜಿನಾಮೆಯಿಂದ ಬಜೆಟ್‌ಗೆ ಯಾವುದೇ ಧಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.