ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೊಹಾಲಿ ಟೆಸ್ಟ್ :ಭಾರತಕ್ಕೆ 258 ರನ್ ಗುರಿ

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ 258ರನ್‌ಗಳ ಗುರಿಯನ್ನಿಟ್ಟಿದೆ. ಮೊದಲು ಬ್ಯಾಟಿಂಗ್ ಮಾಡಿದ...

Rashmi Kasaragodu
Updated On : 23 Jan 2013, 6:55 am

ಮೊಹಾಲಿ: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ 258ರನ್‌ಗಳ ಗುರಿಯನ್ನಿಟ್ಟಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 257 ರನ್‌ಗಳನ್ನು ಕಲೆ ಹಾಕಿದೆ.

ಇಂಗ್ಲೆಂಡ್‌ನ ಆರಂಭ ಉತ್ತಮವಾಗಿದ್ದು, ಆರಂಭಿಕ ಆಟಗಾರನಾದ ಎಎನ್ ಕುಕ್ 76ರನ್ ಗಳಿಸಿದ್ದಾರೆ. ಕುಕ್‌ನ ಜತೆ ಓಪನರ್ ಆಗಿ ಕಣಕ್ಕಿಳಿದಿದ್ದ ಬೆಲ್ ಇಶಾಂತ್ ಬಾಲ್‌ಗೆ ಔಟಾಗಿದ್ದು ಕೇವಲ 10 ರನ್‌ಗಳಷ್ಟೇ ಗಳಿಸಲು ಸಾಧ್ಯವಾಯಿತು. ನಂತರ ಅಂಗಣಕ್ಕಿಳಿದ ಪೀಟರ್‌ಸನ್ ಕುಕ್‌ಗೆ ಉತ್ತಮ ಸಾಥ್ ನೀಡಿದ್ದು, ಈ ಮೂಲಕ ಇಂಗ್ಲೆಂಡ್ ಭರ್ಜರಿ ರನ್ ಪೇರಿಸಿದೆ.

ಅಶ್ವಿನ್ ಬಾಲ್‌ಗೆ ಕುಕ್ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ನಡೆದಾಗ ಮೋರ್ಗನ್, ಪೀಟರ್‌ಸನ್‌ಗೆ ಜತೆಯಾದರೂ ಉತ್ತಮ ಪ್ರದರ್ಶನ ನೀಡಲು ಮೋರ್ಗನ್‌ಗೆ ಸಾಧ್ಯವಾಗಲಿಲ್ಲ. 3 ರನ್‌ಗಳಿಸಿದ ಮೋರ್ಗನ್ ಅಶ್ವಿನ್ ಬಾಲ್‌ಗೆ ವಿಕೆಟ್ ಒಪ್ಪಿಸಿದಾಗ ಇಂಗ್ಲೆಂಡ್‌ನ ಬ್ಯಾಟಿಂಗ್ ರೇಟ್‌ನಲ್ಲಿ ಪತನ ಕಂಡು ಬಂತು. ನಂತರ ಕ್ರೀಸ್‌ಗಿಳಿದ ಎಸ್ ಆರ್ ಪಟೇಲ್ 1 ರನ್ ಗಳಿಸಿ ಜಡೇಜಾ ಬಾಲ್‌ಗೆ ಔಟಾದರು.
 
ಒಂದರ ಹಿಂದೆ ಇನ್ನೊಂದು ವಿಕೆಟ್ ಬೀಳುತ್ತಿದ್ದಂತೆ ಕ್ರೀಸ್‌ನಲ್ಲಿದ್ದ ಪೀಟರ್‌ಸನ್‌ಗೆ ನೆರವಾಗಿ ಬಂದದ್ದು ಜೆ.ಇ. ರೂಟ್. ರೂಟ್ ಮತ್ತು ಪೀಟರ್‌ಸನ್ ಭರ್ಜರಿ
ಜತೆಯಾಟವಾಡಿದ್ದು, ಇದರ ಫಲವಾಗಿ ಇಂಗ್ಲೆಂಡ್ ಮತ್ತೆ ಚೇತರಿಸಿಕೊಂಡಿತು. 46ನೇ ಓವರ್‌ನಲ್ಲಿ ಇಶಾಂತ್ ಶರ್ಮಾ ಬಾಲ್‌ಗೆ ಪೀಟರ್‌ಸನ್ (76) ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು. ಅನಂತರ ಬಂದ ಬಟ್ಲರ್ (14) ಹಾಗು ಬ್ರೆಸ್‌ನಾನ್ (0) ಜಡೇಜಾ ಬಾಲ್‌ಗೆ ಯುವರಾಜ್‌ಗೆ ಕ್ಯಾಚಿತ್ತು ಔಟಾದರು.

49ನೇ ಓವರ್‌ನಲ್ಲಿ ಟ್ರೇಡ್‌ವೆಲ್ ರೂಟ್‌ಗೆ ಜತೆಯಾಗಿದ್ದು 6ರನ್ ಗಳಿಸಿದ್ದಾರೆ. ಪ್ರಸ್ತುತ ಪಂದ್ಯದಲ್ಲಿ 45 ಬಾಲ್‌ಗಳನ್ನೆದುರಿಸಿ 57ರನ್ ಬಾರಿಸಿದ ರೂಟ್ ಉತ್ತಮ ಪ್ರದರ್ಶನ ನೀಡಿದ್ದಾರೆ. 14 ಇತರೆ ರನ್‌ಗಳನ್ನು ನೀಡಿದ ಭಾರತಕ್ಕೆ 7 ವಿಕೆಟ್ ಕಬಳಿಸಲಷ್ಟೇ ಸಾಧ್ಯವಾಗಿದೆ.

ಭಾರತ ಪರವಾಗಿ ಜಡೇಜಾ 3 ವಿಕೆಟ್, ಆರ್. ಅಶ್ವಿನ್ ಮತ್ತು ಇಶಾಂತ್ ಶರ್ಮಾ ತಲಾ 2 ವಿಕೆಟ್ ಗಳಿಸಿಕೊಂಡಿದ್ದಾರೆ.

ಇಂಗ್ಲೆಂಡ್‌ನ 258ರನ್ ಗುರಿ ಬೆನ್ನತ್ತಿ ಕ್ರೀಸ್‌ಗಿಳಿದ ಭಾರತ ಆರಂಭದಲ್ಲೇ ಮುಗ್ಗರಿಸಿದೆ. 6ನೇ ಓವರ್‌ನಲ್ಲಿ ಬ್ರೆನ್‌ಸನ್ ಬಾಲ್‌ಗೆ ಗೌತಮ್ ಗಂಭೀರ್‌ನ ವಿಕೆಟ್ ಕಳೆದುಕೊಳ್ಳುವ ಮೂಲಕ ಭಾರತ ಆಘಾತಕ್ಕೀಡಾಗಿದೆ. ಓಪನರ್ ಗೌತಮ್ ಗಂಭೀರ್ 10 ರನ್‌ಗಳನ್ನು ಗಳಿಸಿ ಹೊರನಡೆದಾಗ ಭಾರತಕ್ಕೆ ಆಸರೆಯಾದುದು ರೋಹಿತ್ ಶರ್ಮಾ. ಶರ್ಮಾ ಜತೆ ಕೋಹ್ಲಿ ಜತೆಯಾಟ ಉತ್ತಮವಾಗಿತ್ತು. ಆದರೆ 17ನೇ ಓವರ್‌ನಲ್ಲಿ 26ರನ್ ಗಳಿಸಿದ ಕೊಹ್ಲಿ ಟ್ರೆಡ್‌ವೆಲ್ ಬಾಲ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಕ್ರೀಸ್‌ಗಿಳಿದ ಯುವರಾಜ್ ಸಿಂಗ್ (3)ರನ್ ಗಳಿಸಿ ಪೆವಿಲಿಯನ್‌ಗೆ ನಡೆದಾಗ ರೈನಾ ಆಸರೆಯಾಗಿ ನಿಂತರು. ಉತ್ತಮ ಫಾರ್ಮ್‌ನಲ್ಲಿದ್ದ ಶರ್ಮಾ 93 ಬಾಲ್‌ಗಳನ್ನೆದುರಿಸಿ 83ರನ್ ಗಳಿಸಿದ್ದು ಫಿನ್ ಬಾಲ್‌ಗೆ ವಿಕೆಟ್ ಒಪ್ಪಿಸಿದರು.

ಇದೀಗ 35ನೇ ಓವರ್‌ನಲ್ಲಿ ಭಾರತ 4 ವಿಕೆಟ್ ಕಳೆದುಕೊಂಡಿದ್ದು, 173 ರನ್ ಕಲೆ ಹಾಕಿದೆ. ರೈನಾ (36) ಹಾಗು 7 ರನ್ ಗಳಿಸಿ ಧೋನಿ ಕ್ರೀಸ್‌ನಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement