ಲಂಡನ್ನಲ್ಲಿ ಕಾಣೆಯಾಗಿದ್ದ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ
ಲಂಡನ್ನಲ್ಲಿ ಕಾಣೆಯಾಗಿದ್ದ ಭಾರತೀಯ ವಿದ್ಯಾರ್ಥಿಯ ಶವ ಕಾಲುವೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ತನಿಖೆ ನಡೆಸಿದ ಬ್ರಿಟಿಷ್ ಪೊಲೀಸರು ಈ ವಿದ್ಯಾರ್ಥಿಯ ಮೇಲೆ...
ಮ್ಯಾಂಚೆಸ್ಟರ್: ಲಂಡನ್ನಲ್ಲಿ ಕಾಣೆಯಾಗಿದ್ದ ಭಾರತೀಯ ವಿದ್ಯಾರ್ಥಿಯ ಶವ ಕಾಲುವೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ತನಿಖೆ ನಡೆಸಿದ ಬ್ರಿಟಿಷ್ ಪೊಲೀಸರು ಈ ವಿದ್ಯಾರ್ಥಿಯ ಮೇಲೆ ಯಾವುದೇ ದಾಳಿ ನಡೆದಿರುವ ಬಗ್ಗೆ ಕುರುಹು ಇಲ್ಲ ಎಂದು ಹೇಳಿದ್ದಾರೆ.
ಮ್ಯಾಂಚೆಸ್ಟರ್ ಮೆಟ್ರೋಪೊಲಿಟನ್ ಯುನಿವರ್ಸಿಟಿಯ ವಿದ್ಯಾರ್ಥಿಯಾದ 18ರ ಹರೆಯದ ಸೌವಿಕ್ ಪಾಲ್ ಹೊಸವರ್ಷದ ಹಿಂದಿನ ದಿನ ನಾಪತ್ತೆಯಾಗಿದ್ದನು.
ಮ್ಯಾಂಚೆಸ್ಟರ್ ಯುನೈಟೆಡ್ಸ್ ಕ್ಲಬ್ನ ಬಳಿಯಲ್ಲಿರುವ ಕಾಲುವೆಯಲ್ಲಿ ಯುವಕನ ಶವ ಪತ್ತೆಯಾಗಿತ್ತು.
ಆದಾಗ್ಯೂ, ಸೌವಿಕ್ನ ಸಾವಿಗೆ ನಿಖರವಾದ ಕಾರಣಗಳೇನೂ ಈವರೆಗೆ ಪತ್ತೆಯಾಗಿರದೇ ಇದ್ದರೂ, ಆತನ ಮೇಲೆ ಯಾವುದೇ ದಾಳಿ ನಡೆದಿರುವ ಸಾಧ್ಯತೆಯಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸೌವಿಕ್ ಬೆಂಗಳೂರು ಮೂಲದವರಾಗಿದ್ದು, ಅವರ ಅಪ್ಪ ಶಂತನು ಈಗಾಗಲೇ ಲಂಡನ್ಗೆ ತೆರಳಿದ್ದು ಪೊಲೀಸರ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲಿದ್ದಾರೆ.