ಗೃಹ ಮಂತ್ರಿ ಸ್ಥಾನದ ಬಗ್ಗೆ ಶಿಂಧೆಗೆ ಅರ್ಥೈಸುವ ಅಗತ್ಯವಿದೆ: ರಾಜನಾಥ್
ನವದೆಹಲಿ: ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರಿಗೆ ಗೃಹ ಮಂತ್ರಿ ಸ್ಥಾನದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಭಾರತೀಯ ಜನತಾ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.
ಬಿಜೆಪಿ ಹಿಂದೂ ಭಯೋತ್ಪಾದಕರ ತರಬೇತಿ ಶಿಬಿರ ನಡೆಸುತ್ತಿದೆ ಎಂದು ಹೇಳಿ ವಿವಾದಕ್ಕೀಡಾಗಿರುವ ಸುಶೀಲ್ ಕುಮಾರ್ ಶಿಂಧೆ ಅವರನ್ನು ತರಾಟೆಗೆ ತೆಗೆದುಕೊಂಡ ರಾಜನಾಥ್ ಸಿಂಗ್, ಸುಶೀಲ್ಕುಮಾರ್ ಅವರು ದೇಶದ ಗೃಹ ಮಂತ್ರಿ ಎಂದು ಮರೆತ್ತಿದ್ದಾರೆ. ಅವರಿಗೆ ತಮ್ಮ ಸ್ಥಾನದ ಬಗ್ಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಭಯೋತ್ಪಾದನೇ ವಿರುದ್ಧ ಹೋರಾಡುತ್ತಿಲ್ಲ. ಅದು ಮತಗಳ ಆಮೀಷಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಾ, ವಿಷದ ವಾತಾವರಣ ಸೃಷ್ಟಿಸುತ್ತಿದೆ ಎಂದು ರಾಜನಾಥ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.