ಬಿಜೆಪಿ ಉಗ್ರ ಕೇಂದ್ರಗಳಿಗೆ ದಾಳಿ ನಡೆಸಲು ತಾಲೀಬಾನ್ ಯೋಜನೆ
ಮುಸ್ಲಿಂ ವಿರುದ್ಧ ಬಿಜೆಪಿ ಪ್ರಾಯೋಜಿತ ಭಯೋತ್ಪಾದನೆ ಕೇಂದ್ರಗಳು ಕಾರ್ಯವೆಸಗುತ್ತಿದ್ದು, ಅವುಗಳನ್ನು ನಿಯಂತ್ರಿಸಲು ವಿಶ್ವಸಂಸ್ಥೆ ಹಾಗು ಅಮೆರಿಕಕ್ಕೆ ಸಾಧ್ಯವಾಗದೇ ಇದ್ದರೆ...
ಪೇಶಾವರ್: ಮುಸ್ಲಿಂ ವಿರುದ್ಧ ಬಿಜೆಪಿ ಪ್ರಾಯೋಜಿತ ಭಯೋತ್ಪಾದನೆ ಕೇಂದ್ರಗಳು ಕಾರ್ಯವೆಸಗುತ್ತಿದ್ದು, ಅವುಗಳನ್ನು ನಿಯಂತ್ರಿಸಲು ವಿಶ್ವಸಂಸ್ಥೆ ಹಾಗು ಅಮೆರಿಕಕ್ಕೆ ಸಾಧ್ಯವಾಗದೇ ಇದ್ದರೆ ಅಂಥಾ ಪ್ರದೇಶಗಳಿಗೆ ದಾಳಿ ಮಾಡುವುದಾಗಿ ಪಾಕಿಸ್ತಾನಿ ತಾಲೀಬಾನ್ ಉಗ್ರ ಸಂಘಟನೆ ಯೋಜನೆ ರೂಪಿಸಿದೆ.
ತಮ್ಮ ಯೋಜನೆಯ ಬಗ್ಗೆ ತೆಹರಿಕ್ ಇ ತಾಲೀಬಾನ್ ಪಾಕಿಸ್ತಾನ್ (ಟಿಟಿಪಿ) ವಕ್ತಾರ ಇಹ್ಸಾನುಲ್ಲ ಇಹ್ಸಾನ್ ಗುರುವಾರ ಹೇಳಿಕೊಂಡಿದ್ದಾರೆ.
ಕಾಶ್ಮೀರದಲ್ಲಿ ಮುಗ್ಧ ಮುಸ್ಲಿಂಗಳನ್ನು ಹಿಂದೂ ಉಗ್ರವಾದಿಗಳು ಹತ್ಯೆಗೈಯ್ಯುತ್ತಿದ್ದಾರೆ ಎಂದು ಪಾಕ್ ಪತ್ರಿಕೆ ವರದಿ ಮಾಡಿದೆ. ಅದೇ ವೇಳೆ ಇತ್ತೀಚೆಗೆ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆಯವರು ಬಿಜೆಪಿ ತಮ್ಮ ಶಿಬಿರಗಳಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದೆ ಎಂಬ ಹೇಳಿಕೆ ನೀಡಿರುವುದನ್ನೂ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಹ್ಸಾನ್ ವಿಶ್ವಸಂಸ್ಥೆ ಮತ್ತು ಅಮೆರಿಕ ಇಂಥಾ ಶಿಬಿರಗಳ ಮೇಲೆ ದಾಳಿ ಮಾಡಬೇಕೆಂದು ಹೇಳಿದ್ದಾರೆ.
ಒಂದು ವೇಳೆ ವಿಶ್ವಸಂಸ್ಥೆ ಮತ್ತು ಅಮೆರಿಕ ಬಿಜೆಪಿ ಆರೆಸ್ಸೆಸ್ಸ್ ಪ್ರಾಯೋಜಿತ ಉಗ್ರ ಸಂಘಟನೆಗಳ ಮೇಲೆ ಕ್ರಮ ತೆಗೆದುಕೊಳ್ಳದೇ ಇದ್ದರೆ ಟಿಟಿಪಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ಇಹ್ಸಾನ್ ಮುನ್ನೆಚ್ಚರಿಕೆ ನೀಡಿದ್ದಾರೆ.