ಸ್ಪೀಕರ್ ನಾಪತ್ತೆ: ಹೈಕೋರ್ಟ್ ಮೊರೆ ಹೋಗಲು ಶಾಸಕರ ನಿರ್ಧಾರ
ವಿದೇಶ ಪ್ರವಾಸದಲ್ಲಿರುವ ಸ್ಪೀಕರ್ ಕೆ.ಜಿ.ಬೋಪಯ್ಯ ಅವರನ್ನು ಹುಡುಕಿ ಕೊಡುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಲು...
ಬೆಂಗಳೂರು: ವಿದೇಶ ಪ್ರವಾಸದಲ್ಲಿರುವ ಸ್ಪೀಕರ್ ಕೆ.ಜಿ.ಬೋಪಯ್ಯ ಅವರನ್ನು ಹುಡುಕಿ ಕೊಡುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಲು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬೆಂಬಲಿತ ಶಾಸಕರು ನಿರ್ಧರಿಸಿದ್ದಾರೆ.
ಸಚಿವ ಸಿ.ಎಂ. ಉದಾಸಿ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಾವೇರಿ ಶಾಸಕ ನೆಹರೂ ಓಲೆಕಾರ್ ಅವರು, ಬೋಪಯ್ಯರನ್ನು ಸರ್ಕಾರದ ಪ್ರಮುಖರೊಬ್ಬರು ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ಈ ಸಂಬಂಧ ತಾವು ಹೈಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು.
ಇನ್ನು ಎರಡು ದಿನ ನಾವು ಕಾದು ನೋಡುತ್ತೇವೆ. ಅಷ್ಟರೊಳಗೆ ಅವರು ವಾಪಸ್ಸಾಗದಿದ್ದರೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸುವುದಾಗಿ ಓಲೆಕಾರ್ ಹೇಳಿದ್ದಾರೆ.