ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಫೆ.4ರೊಳಗೆ ಬಹುಮತ ಸಾಬೀತು ಪಡಿಸಲು ಆದೇಶ

ಫೆಬ್ರವರಿ 4 ತಾರೀಖಿನೊಳಗೆ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಆದೇಶ ನೀಡಿದ್ದಾರೆ...

Rashmi Kasaragodu
Updated On : 25 Jan 2013, 4:05 am

ಬೆಂಗಳೂರು: ಫೆಬ್ರವರಿ 4 ತಾರೀಖಿನೊಳಗೆ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಆದೇಶ ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ನಿಷ್ಠರಾಗಿರುವ 13 ಶಾಸಕರು ಶೆಟ್ಟರ್ ಸರ್ಕಾರಕ್ಕೆ ರಾಜಿನಾಮೆ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಶೆಟ್ಟರ್ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಬೇಕಾದ ಪರಿಸ್ಥಿತಿ ಬಂದೊದಗಿದೆ.

ಸಿಎಂ ಶೆಟ್ಟರ್ ಗುರುವಾರ ರಾಜ್ಯಪಾಲರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ರಾಜ್ಯಪಾಲರು ಈ ಆದೇಶವನ್ನು ನೀಡಿದ್ದಾರೆ.

ಆದರೆ ತಮಗೆ ಸಂಖ್ಯಾಬಲವಿದೆ. ನಾವು ಬಹುಮತ ಸಾಬೀತು ಪಡಿಸುತ್ತೇವೆ ಎಂದು ಶೆಟ್ಟರ್ ಹೇಳಿದ್ದಾರೆ.

ಸ್ಪೀಕರ್ ಬೋಪಯ್ಯ ಅವರು ವಿದೇಶ ಪ್ರವಾಸದಲ್ಲಿರುವುದರಿಂದ 13 ಶಾಸಕರ ರಾಜಿನಾಮೆ ಸ್ವೀಕೃತವಾಗಿಲ್ಲ. ಏತನ್ಮಧ್ಯೆ, ರಾಜಿನಾಮೆ ನೀಡಲು ಮುಂದಾಗಿರುವ ಶಾಸಕರು ರಾಜಭವನಕ್ಕೆ ತೆರಳಿ ಸ್ಪೀಕರ್ ಅನುಪಸ್ಥಿತಿಯ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಶೆಟ್ಟರ್‌ಗೆ ಬುಲಾವ್ ನೀಡಿದ್ದು, ಸರ್ಕಾರ ಬಹುಮತ ಸಾಬೀತು ಪಡಿಸಲು ಆದೇಶ ಹೊರಡಿಸಿದ್ದಾರೆ.

ಸಿಎಂ ಉದಾಸಿ ಮತ್ತು ಶೋಭಾ ಕರಂದ್ಲಾಜೆ  ತಮ್ಮ ಸಚಿವ ಸ್ಥಾನಕ್ಕೆ ಹಾಗು 13 ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದು, ಇದರಿಂದಾಗಿ ಶೆಟ್ಟರ್ ಸರ್ಕಾರ ಸಂಕಷ್ಟಕ್ಕೀಡಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement