ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮುಖ್ಯಮಂತ್ರಿ ಶೆಟ್ಟರ್‌ಗೆ ರಾಜ್ಯಪಾಲರ ಬುಲಾವ್

ಶೆಟ್ಟರ್ ಸರ್ಕಾರದಿಂದ ಶಾಸಕರು ರಾಜಿನಾಮೆ ನೀಡಿ ಹೊರನಡೆಯುತ್ತಿದ್ದಂತೆ ರಾಜ್ಯಪಾಲ ....

Rashmi Kasaragodu
Updated On : 25 Jan 2013, 7:13 am

ಬೆಂಗಳೂರು: ಶೆಟ್ಟರ್ ಸರ್ಕಾರದಿಂದ ಶಾಸಕರು ರಾಜಿನಾಮೆ ನೀಡಿ ಹೊರನಡೆಯುತ್ತಿದ್ದಂತೆ ರಾಜ್ಯಪಾಲ ಹೆಚ್ ಆರ್ ಭಾರಧ್ವಜ್ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ಗೆ ಬುಲಾವ್ ನೀಡಿದ್ದಾರೆ.

ಈ ಬಗ್ಗೆ ಶೆಟ್ಟರ್ ತಮಗೆ ವಿವರಣೆ ನೀಡಬೇಕೆಂದು ಹೇಳಿದ್ದು, ಅಗತ್ಯವಿದ್ದರೆ ತಾನು ಅವರಲ್ಲಿ ಬಹುಮತ ಸಾಬೀತು ಪಡೆಸಲು ಆದೇಶಿಸುವುದಾಗಿ ಹೇಳಿದ್ದಾರೆ.

ಸ್ಪೀಕರ್ ಕೆ.ಜಿ ಬೋಪಯ್ಯ ಅವರ ಅನುಪಸ್ಥಿತಿಯ ಬಗ್ಗೆ  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ರಾಜ್ಯಪಾಲರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ರಾಜ್ಯಪಾಲರು ಶೆಟ್ಟರ್ ಅವರಿಂದ ವಿವರಣೆ ಕೇಳಿದ್ದಾರೆ.

ಬಿಎಸ್‌ವೈ ಅವರಿಂದ ದೂರು ಸ್ವೀಕರಿಸಿದ ರಾಜ್ಯಪಾಲರು ವಿಧಾನಸಭೆಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದು, ಸ್ಪೀಕರ್ ಅವರ ಪ್ರವಾಸದ ಬಗ್ಗೆ ವಿವರಗಳನ್ನು ನೀಡುವಂತೆ ಹೇಳಿದ್ದಾರೆ.

ಬಿಜೆಪಿಯ 13 ಶಾಸಕರು ರಾಜಿನಾಮೆ ನೀಡಲು ಮುಂದಾಗಿದ್ದು, ಅವರು ರಾಜಿನಾಮೆ ಸಲ್ಲಿಸಬೇಕಾದರೆ ಸ್ಪೀಕರ್ ವಿದೇಶ ಪ್ರಯಾಣ ಕೈಗೊಂಡಿದ್ದರು. ಸ್ಪೀಕರ್‌ನ ಅನುಪಸ್ಥಿತಿಯಿಂದಾಗಿ ಶಾಸಕರಿಗೆ ರಾಜಿನಾಮೆ ನೀಡಲು ತಡೆಯುಂಟಾಗಿರುವುದರಿಂದ ಬಿಎಸ್‌ವೈ ಸ್ಪೀಕರ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement