ವಿಶ್ವದ ಅಸುರಕ್ಷಿತ ಏರ್‌ಲೈನ್ಸ್‌ಗಳ ಪಟ್ಟಿಯಲ್ಲಿ ಏರ್‌ಇಂಡಿಯಾ
ವಿಶ್ವದ ಅಸುರಕ್ಷಿತ ಏರ್‌ಲೈನ್ಸ್‌ಗಳ ಪಟ್ಟಿಯಲ್ಲಿ ಭಾರತದ ಏರ್ ಇಂಡಿಯಾ ಮೂರನೇ ಸ್ಥಾನ ಗಳಿಸಿಕೊಂಡಿದೆ. ಚೈನಾ ಏರ್‌ಲೈನ್ಸ್ ಮತ್ತು ಟಿಎಎಂ...
ವಾಷಿಂಗ್ಟನ್: ವಿಶ್ವದ ಅಸುರಕ್ಷಿತ ಏರ್‌ಲೈನ್ಸ್‌ಗಳ ಪಟ್ಟಿಯಲ್ಲಿ ಭಾರತದ ಏರ್ ಇಂಡಿಯಾ ಮೂರನೇ ಸ್ಥಾನ ಗಳಿಸಿಕೊಂಡಿದೆ. ಚೈನಾ ಏರ್‌ಲೈನ್ಸ್ ಮತ್ತು ಟಿಎಎಂ ಏರ್‌ಲೈನ್ ಈ ಪಟ್ಟಿಯಲ್ಲಿ ಕ್ರಮವಾಗಿ ಪ್ರಥಮ ಹಾಗು ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಹ್ಯಾಂಬರ್ಗ್ ಮೂಲದ ಜೆಟ್ ಏರ್‌ಲೈನರ್ ಕ್ರಾಷ್ ಡಾಟಾ ಇವಾಲ್ಯುಏಷನ್ ಸೆಂಟರ್ (ಜೆಎಸಿಡಿಇಸಿ) ತಯಾರಿಸಿದ 60 ಏರ್‌ಲೈನ್ಸ್ ಗಳ ಪಟ್ಟಿಯಲ್ಲಿ ಏರ್ ಇಂಡಿಯಾ 58ನೇ ಸ್ಥಾನ ಪಡೆದುಕೊಂಡಿದೆ.
ಫಿನ್‌ಏರ್ ವಿಶ್ವದ ಸುರಕ್ಷಿತ ಏರ್‌ಲೈನ್ಸ್ ಆಗಿದ್ದು, ತದ ನಂತರದ ಸ್ಥಾನವನ್ನು ಏರ್ ನ್ಯೂಜಿಲ್ಯಾಂಡ್, ಕ್ಯಾಥಿ ಪೆಸಿಫಿಕ್ ಮತ್ತು ಎಮರೈಟ್ಸ್ ಪಡೆದುಕೊಂಡಿರುವುದಾಗಿ ಜೆಎಸಿಡಿಇಸಿ ಹೇಳಿದೆ.
ಈ ಪಟ್ಟಿಯಲ್ಲಿ ಅಗ್ರ 9 ಸ್ಥಾನಗಳಲ್ಲಿರುವ ಏರ್‌ಲೈನ್ಸ್‌ಗಳು ಕಳೆದ 30 ವರ್ಷಗಳಲ್ಲಿ ಯಾವುದೇ ಅಪಘಾತಕ್ಕೊಳಗಾಗುವುದಾಗಲೀ, ಇನ್ಯಾವುದೋ ಸಮಸ್ಯೆಗಳಿಗೆ ಸಿಲುಕಿದ ಘಟನೆಗಳೇ ನಡೆದಿಲ್ಲ ಎಂದು ಪ್ರಸ್ತುತ ಸಂಸ್ಥೆ ಹೇಳಿದೆ.