ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ವಿಶ್ವರೂಪಂ'ಗೆ ನಿಷೇಧ ಬೇಡ; ಕಮಲ್ ಗೆ ರಜನಿಕಾಂತ್ ಬೆಂಬಲ

ಕಮಲ್ ಹಾಸನ್ ರ ಬಹು ನಿರೀಕ್ಷಿತ ಚಿತ್ರ 'ವಿಶ್ವರೂಪಂ'ಗೆ ನಿಷೇಧ ಹೇರಿರುವುದನ್ನು ಸೂಪರ್ ಸ್ಟಾರ್ ರಜನಿಕಾಂತ್ ಖಂಡಿಸಿದ್ದು ತಮ್ಮ ಗೆಳೆಯ ಕಮಲ್ ಹಾಸನ್ ಗೆ ಬೆಂಬಲವಾಗಿ ನಿಂತಿದ್ದಾರೆ....

Rashmi Kasaragodu
Updated On : 25 Jan 2013, 4:42 am

ಮುಂಬೈ:  ಕಮಲ್ ಹಾಸನ್ ರ ಬಹು ನಿರೀಕ್ಷಿತ ಚಿತ್ರ 'ವಿಶ್ವರೂಪಂ'ಗೆ ನಿಷೇಧ ಹೇರಿರುವುದನ್ನು ಸೂಪರ್ ಸ್ಟಾರ್ ರಜನಿಕಾಂತ್ ಖಂಡಿಸಿದ್ದು ತಮ್ಮ ಗೆಳೆಯ ಕಮಲ್ ಹಾಸನ್ ಗೆ ಬೆಂಬಲವಾಗಿ ನಿಂತಿದ್ದಾರೆ.

ಜನವರಿ 25ಕ್ಕೆ ವಿಶ್ವರೂಪಂ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರ ಬಿಡುಗಡೆಗೆ ಮುಸ್ಲಿಂ ಜನಾಂಗದಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿತ್ರಕ್ಕೆ ನಿಷೇಧ ಹೇರಲಾಗಿತ್ತು.

ಈ ವೇಳೆ ಕಮಲ್ ಬೆಂಬಲಕ್ಕೆ ನಿಂತ ರಜನೀಕಾಂತ್, ಪ್ರಸ್ತುತ ಚಿತ್ರದ ಬಿಡುಗಡೆಗೆ ತಡೆಯೊಡ್ಡಬೇಡಿ ಎಂದು ಮುಸ್ಲಿಂ ಜನಾಂಗದವರಲ್ಲಿ ವಿನಂತಿಸಿದ್ದಾರೆ. ಅದೇ ವೇಳೆ ಚಿತ್ರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯನ್ನು ಕೈಬಿಡುವಂತೆ ಒತ್ತಾಯಿಸಿದ್ದು, ಈ ಮೂಲಕ ನಿಷೇಧ ಹೇರಿಕೆಯಿಂದ ಚಿತ್ರ ಮುಕ್ತವಾಗುವಂತೆ ಮಾಡಿ ಎದು ರಜನಿ ಮನವಿ ಮಾಡಿದ್ದಾರೆ.

ಮುಸ್ಲಿಂ ಸಮುದಾಯವನ್ನು ಇಲ್ಲಿ ಅವಹೇಳನ ಮಾಡಿಲ್ಲ. ಆದ್ದರಿಂದಲೇ ಕಮಲ್ ಚಿತ್ರ ಬಿಡುಗಡೆಗೆ ಮುನ್ನ ಮುಸ್ಲಿಂ ಸಹೋದರರಿಗೆ ಸ್ಪೆಷಲ್ ಸ್ಕ್ರೀನಿಂಗ್ ಮಾಡಿದ್ದಾರೆ ಎಂದು ರಜನಿ ಹೇಳಿದ್ದಾರೆ.

ಪ್ರಸ್ತುತ ಚಿತ್ರಕ್ಕಾಗಿ ಕಮಲ್  100 ಕೋಟಿ ರು. ವ್ಯಯಿಸಿದ್ದಾರೆ. ಅವರು ಈ ಚಿತ್ರಕ್ಕಾಗಿ ಎಷ್ಟು ಕಷ್ಟ ಪಟ್ಟಿದ್ದಾರೆ ಎಂಬುದು ನನಗೊತ್ತು. ಕಮಲ್ ಒಬ್ಬ ಸಾಧಾರಣ ನಟ ಅಲ್ಲ. ಅವರು ತಮಿಳು ಸಿನಿಮಾಗೆ ಜಾಗತಿಕ ಮೌಲ್ಯವನ್ನು ತಂದುಕೊಟ್ಟವರು. ನಾನು ನನ್ನ ಮುಸ್ಲಿಂ ಸಹೋದರರನ್ನು ಗೌರವಿಸುತ್ತೇನೆ. ಆದ್ದರಿಂದ ಈ ಪ್ರತಿಭಟನೆಯನ್ನು ಕೈ ಬಿಟ್ಟು ಚಿತ್ರ ಬಿಡುಗಡೆಗೆ ಸಹಕರಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ರಜನಿ ವಿನಂತಿ ಮಾಡಿದ್ದಾರೆ.

ಮುಸ್ಲಿಂ ಸಂಘಟನೆಗಳು ತಮ್ಮ ಧರ್ಮವನ್ನು ಕಮಲ್ ವಿಶ್ವರೂಪಂನಲ್ಲಿ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ತಮಿಳ್ನಾಡಿನಾದ್ಯಂತ ಭಾರೀ ಪ್ರತಿಭಟನೆಗಳು ವ್ಯಕ್ತವಾಗಿತ್ತು.

ಪ್ರತಿಭಟನೆಗಳ ಕಾವು ಏರುತ್ತಿದ್ದಂತೆ ಮದ್ರಾಸ್ ಹೈಕೋರ್ಟ್ ಜನವರಿ 28ರ ವರೆಗೆ ಪ್ರಸ್ತುತ ಚಿತ್ರದ ಬಿಡುಗಡೆಗೆ ನಿಷೇಧ ಹೇರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement