ಹೆಡ್ಲಿಗೆ ಇನ್ನೂ ಕಠಿಣ ಶಿಕ್ಷೆಯಾಗಬೇಕಿತ್ತು: ಖುರ್ಷಿದ್
ಲಷ್ಕರೆ ತೊಯ್ಬಾ ಉಗ್ರ ಡೇವಿಡ್ ಹೆಡ್ಲಿಗೆ ಇನ್ನೂ ಕಠಿಣ ಶಿಕ್ಷೆ ವಿಧಿಸಬೇಕಿತ್ತು ಎಂದು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.26/11ರ ಮುಂಬೈ ದಾಳಿಯಲ್ಲಿ ಪ್ರಮುಖ...
ನವದೆಹಲಿ: ಲಷ್ಕರೆ ತೊಯ್ಬಾ ಉಗ್ರ ಡೇವಿಡ್ ಹೆಡ್ಲಿಗೆ ಇನ್ನೂ ಕಠಿಣ ಶಿಕ್ಷೆ ವಿಧಿಸಬೇಕಿತ್ತು ಎಂದು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.
26/11ರ ಮುಂಬೈ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಾಕಿಸ್ತಾನಿ ಅಮೆರಿಕನ್ ಉಗ್ರ ಹೆಡ್ಲಿಗೆ ಅಮೆರಿಕ ನ್ಯಾಯಾಲಯವು 35 ವರ್ಷ ಜೈಲು ವಿಧಿಸಿತ್ತು.
ಆತನಿಗೆ ಇದಕ್ಕಿಂತ ದೊಡ್ಡ ಶಿಕ್ಷೆ ನೀಡಬೇಕೆಂದು ನಾವು ಬಯಸಿದ್ದೆವು ಎಂದು ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಖುರ್ಷಿದ್ ಹೇಳಿದ್ದಾರೆ.
ಹೆಡ್ಲಿ ತಪ್ಪಿತಸ್ಥ ಎಂದು ಸಾಬೀತಾಗಿರುವುದರಿಂದ ಆತನನ್ನು ಪಾಕಿಸ್ತಾನ, ಭಾರತ ಅಥವಾ ಡೆನ್ಮಾರ್ಕ್ಗೆ ಗಡಿಪಾರು ಮಾಡಲಾಗುವುದಿಲ್ಲ ಎಂದು ಅಮೆರಿಕದ ನ್ಯಾಯವಾದಿ ಹೇಳಿದ್ದರು.
ಆದಾಗ್ಯೂ, ಹೆಡ್ಲಿಯನ್ನು ಭಾರತಕ್ಕೆ ತರಲು ಯತ್ನಿಸಲಾಗಿತ್ತೆ? ಎಂಬ ಪ್ರಶ್ನೆಗೆ ಉತ್ತರಿಸಿದ ಖುರ್ಷಿದ್, ಈ ಪ್ರಶ್ನೆಗೆ ಹೆಡ್ಲಿ ವಿಚಾರಣೆಗೆ ಸಂಬಂಧಿಸಿದ ಅಧಿಕಾರಿಗಳು ಉತ್ತರಿಸಬೇಕಾಗಿದೆ. ನಾನೇನೂ ಹೇಳುವಂತಿಲ್ಲ ಎಂದಿದ್ದಾರೆ.