ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪ್ರವಾಸದಲ್ಲಿದ್ದ ಸ್ಪೀಕರ್ ಬೋಪಯ್ಯ ವಾಪಸ್

ನೇಪಾಳಕ್ಕೆ ಪ್ರವಾಸ ಹೋಗಿದ್ದ ಕರ್ನಾಟಕ ಸ್ಪೀಕರ್ ಕೆ.ಜಿ ಬೋಪಯ್ಯ ಶನಿವಾರ ಬೆಂಗಳೂರಿಗೆ ವಾಪಾಸಾಗಿದ್ದಾರೆ. ಬೆಂಗಳೂರಿಗೆ ಬಂದಿಳಿದ ನಂತರ...

Rashmi Kasaragodu
Updated On : 26 Jan 2013, 7:30 am

ಬೆಂಗಳೂರು:  ನೇಪಾಳಕ್ಕೆ ಪ್ರವಾಸ ಹೋಗಿದ್ದ ಕರ್ನಾಟಕ ಸ್ಪೀಕರ್ ಕೆ.ಜಿ ಬೋಪಯ್ಯ ಶನಿವಾರ ಬೆಂಗಳೂರಿಗೆ ವಾಪಾಸಾಗಿದ್ದಾರೆ. ಬೆಂಗಳೂರಿಗೆ ಬಂದಿಳಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ತನ್ನ ಮೇಲಿರುವ ಆರೋಪ ನಿರಾಧಾರ ಹಾಗು ಸತ್ಯಕ್ಕೆ ದೂರವಾದುದು ಎಂದು ಪ್ರತಿಕ್ರಿಯಿಸಿದ್ದಾರೆ.

ನಾನು ವಿಧಾನಸಭಾ ಅಧಿವೇಶನಕ್ಕೆ ಮುನ್ನ ನೇಪಾಳಕ್ಕೆ ಪ್ರವಾಸ ಹೋಗುವುದಾಗಿ ಈ ಹಿಂದೆಯೇ ನಿರ್ಧರಿಸಿದ್ದೆ. ನಾನು ನನ್ನ  ಕಾರ್ಯಕ್ರಮಗಳನ್ನು ಎಲ್ಲರಿಗೂ ಮುಂಚಿತವಾಗಿ ತಿಳಿಸಬೇಕಾದ ನಿಯಮವೇನೂ ಇಲ್ಲ. ರಾಜಿನಾಮೆ ನೀಡಲು ಮುಂದೆ ಬಂದಿರುವ ಯಾವೊಬ್ಬ ಶಾಸಕರೂ ನನ್ನ ಅಪಾಯಿಂಟ್‌ಮೆಂಟ್ ತೆಗೆದುಕೊಂಡಿರಲಿಲ್ಲ ಎಂದು ಸ್ಪೀಕರ್ ಹೇಳಿದ್ದಾರೆ.

ಸಚಿವ ಉದಾಸಿಯವರು ರಾಜಿನಾಮೆ ನೀಡಲು ಬಂದಾಗ ತಾನು ವಿದೇಶ ಪ್ರವಾಸ ಹೋಗುವ ಕಾರಣ ವಿಧಾನ ಸಭೆಯ ಕಾರ್ಯದರ್ಶಿಯವರನ್ನು ಜನವರಿ 28 ಅಥವಾ 29ಕ್ಕೆ ಭೇಟಿಯಾಗಿ ಎಂದು ನಾನೇ ಹೇಳಿದ್ದೆ.

ಆದಾಗ್ಯೂ, ಫೆಬ್ರವರಿ 4ರಂದು ನಡೆಯಲಿರುವ  ವಿಧಾನ ಸಭಾ ಅಧಿವೇಶನಕ್ಕೆ ಎಲ್ಲ ತಯಾರಿಗಳು ನಡೆದಿದೆ ಎಂದು ಸ್ಪೀಕರ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement