ಭಾರತದೊಂದಿಗೆ ಸ್ನೇಹ ಬಯಸುತ್ತೇವೆ: ಪಾಕ್ ಪ್ರಧಾನಿ
ಪಾಕಿಸ್ತಾನ ಭಾರತದೊಂದಿಗೆ ಸ್ನೇಹ ಸಂಬಂಧವನ್ನು ಬಯಸಿದ್ದು, ಮಾತುಕತೆಯ ಮೂಲಕ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಬಯಸುತ್ತಿದೆ ಎಂದು ಪಾಕ್ ಪ್ರಧಾನಿ ಪರ್ವೇಜ್ ಅಶ್ರಫ್ ಹೇಳಿದ್ದಾರೆ.
ಇಸ್ಲಾಮಾಬಾದ್: ಪಾಕಿಸ್ತಾನ ಭಾರತದೊಂದಿಗೆ ಸ್ನೇಹ ಸಂಬಂಧವನ್ನು ಬಯಸಿದ್ದು, ಮಾತುಕತೆಯ ಮೂಲಕ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಬಯಸುತ್ತಿದೆ ಎಂದು ಪಾಕ್ ಪ್ರಧಾನಿ ಪರ್ವೇಜ್ ಅಶ್ರಫ್ ಹೇಳಿದ್ದಾರೆ.
ಭಾರತದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪಾಕ್ ಪ್ರಧಾನಿ ಶುಭಾಶಯ ಕೋರಿದ್ದು, ತಮ್ಮ ಸಂದೇಶದಲ್ಲಿ ಭಾರತದೊಂದಿಗೆ ಸ್ನೇಹ ಸಂಬಂಧ ಗಟ್ಟಿ ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ.
ಅದೇ ವೇಳೆ ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಉಭಯ ರಾಷ್ಟ್ರಗಳು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆಂದು ಪಾಕ್ ಪ್ರಧಾನಿ ಆಶಿಸಿದ್ದಾರೆ.
ಭಾರತದ ಜನತೆಗೆ ಶುಭಾಶಯವನ್ನು ತಿಳಿಸಿದ ಪಾಕ್ ಪ್ರಧಾನಿ ದೇಶದ ಜನತೆ ಶಾಂತಿ ಹಾಗು ಸಮೃದ್ಧಿಯನ್ನು ಆಶಿಸಿದ್ದಾರೆ.