ಶೆಟ್ಟರ್ ಸರ್ಕಾರ ಸಂಕಷ್ಟದಲ್ಲಿಲ್ಲ: ರಾಜ್ಯಪಾಲ
ಕರ್ನಾಟಕದಲ್ಲಿ ಜಗದೀಶ್ ಶೆಟ್ಟರ್ ಸರ್ಕಾರ ಸಂಕಷ್ಟದಲ್ಲಿಲ್ಲ, ನಾನೀಗ ಸರ್ಕಾರ ಬಹುಮತ ಸಾಬೀತು ಪಡಿಸುವಂತೆ ಹೇಳುವುದಿಲ್ಲ ಎಂದು ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ಶನಿವಾರ...
ಬೆಂಗಳೂರು: ಕರ್ನಾಟಕದಲ್ಲಿ ಜಗದೀಶ್ ಶೆಟ್ಟರ್ ಸರ್ಕಾರ ಸಂಕಷ್ಟದಲ್ಲಿಲ್ಲ, ನಾನೀಗ ಸರ್ಕಾರ ಬಹುಮತ ಸಾಬೀತು ಪಡಿಸುವಂತೆ ಹೇಳುವುದಿಲ್ಲ ಎಂದು ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ಶನಿವಾರ ಹೇಳಿದ್ದಾರೆ.
ರಾಜ್ಯಪಾಲರು ಶುಕ್ರವಾರ ಉಸ್ತುವಾರಿ ಸಚಿವ ಸಿಎಂ ಉದಾಸಿ ಹಾಗು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರ ರಾಜಿನಾಮೆಯನ್ನು ಸ್ವೀಕರಿಸಿದ್ದಾರೆ.
ಬಿಎಸ್ವೈ ಅವರ ನೂತನ ಪಕ್ಷಕ್ಕೆ ಸೇರಿಸುವ ಸಲುವಾಗಿ ಕರಂದ್ಲಾಜೆ ಶೆಟ್ಟರ್ ಸರ್ಕಾರಕ್ಕೆ ರಾಜಿನಾಮೆ ನೀಡಿದ್ದಾರೆ.
ಬಿಜೆಪಿ ನಿಷ್ಠ 13 ಶಾಸಕರು ರಾಜಿನಾಮೆ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಶೆಟ್ಟರ್ ಸರ್ಕಾರ ಸಂಕಷ್ಟಕ್ಕೀಡಾಗುತ್ತದೆ ಎಂದು ಹೇಳಲಾಗುತ್ತಿತ್ತು.
ಆದಾಗ್ಯೂ, ಶೆಟ್ಟರ್ ನಿನ್ನೆ ರಾಜ್ಯಪಾಲರನ್ನು ಭೇಟಿ ಮಾಡಿದ್ದು, ರಾಜ್ಯಪಾಲರು ತಮ್ಮಲ್ಲಿ ಬಹುಮತ ಸಾಬೀತು ಪಡೆಸಲು ಹೇಳಿಲ್ಲ ಎಂದು ಸಿಎಂ ಶೆಟ್ಟರ್ ಹೇಳಿಕೆ ನೀಡಿದ್ದರು.