ತಮಿಳ್ನಾಡಿಗಿಂತ ಕರ್ನಾಟಕಕ್ಕೆ ಹೆಚ್ಚು ಕಾವೇರಿ ನೀರು ಬೇಕು: ಸುಪ್ರೀಂ
ತಮಿಳ್ನಾಡಿಗಿಂತ ಕರ್ನಾಟಕಕ್ಕೆ ಹೆಚ್ಚು ಕಾವೇರಿ ನೀರು ಬೇಕು. ತಮಿಳ್ನಾಡಿನ ನೀರಾವರಿ ಅಗತ್ಯಕ್ಕಿಂತ ಕರ್ನಾಟಕದಲ್ಲಿನ ಲಕ್ಷೋಪಲಕ್ಷ ಜನರಿಗೆ ಕುಡಿಯವ ನೀರು ಪೂರೈಸುವುದು...
ನವದೆಹಲಿ: ತಮಿಳ್ನಾಡಿಗಿಂತ ಕರ್ನಾಟಕಕ್ಕೆ ಹೆಚ್ಚು ಕಾವೇರಿ ನೀರು ಬೇಕು. ತಮಿಳ್ನಾಡಿನ ನೀರಾವರಿ ಅಗತ್ಯಕ್ಕಿಂತ ಕರ್ನಾಟಕದಲ್ಲಿನ ಲಕ್ಷೋಪಲಕ್ಷ ಜನರಿಗೆ ಕುಡಿಯವ ನೀರು ಪೂರೈಸುವುದು ಪ್ರಧಾನವಾಗಿದೆ ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ.
ಕರ್ನಾಟಕ ಸಕಾಲದಲ್ಲಿ ತಮಿಳ್ನಾಡಿಗೆ ಕಾವೇರಿ ನೀರು ಬಿಡದೇ ಇರುವುದರಿಂದ ತಮಿಳ್ನಾಡಿನಲ್ಲಿ ಕೃಷಿ ನಾಶವಾಗಿದೆ. ಇದಕ್ಕೆ ಪರಿಹಾರ ನೀಡಿ ಎಂದು ಆಗ್ರಹಿಸಿ ತಮಿಳ್ನಾಡು ಮುಖ್ಯಮಂತ್ರಿ ಜನವರಿ 22ಕ್ಕೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಬಗ್ಗೆ ಸೋಮವಾರ ವಿಚಾರಣೆ ನಡೆಸಿದ ನ್ಯಾಯಾಲಯ ತಮಿಳ್ನಾಡು ಸರ್ಕಾರದ ನೀರಾವರಿ ಅವಶ್ಯಕತೆಗಳಿಗಿಂತ ಕರ್ನಾಟಕದ ಜನರ ಕುಡಿಯುವ ನೀರಿನ ಅವಶ್ಯಕತೆ ಮುಖ್ಯವಾದುದು ಎಂದು ಹೇಳಿದೆ.
ಅದೇ ವೇಳೆ ಕರ್ನಾಟಕದಲ್ಲಿರುವ ಜನರಿಗೆ ಕುಡಿಯುವ ನೀರಿನ ಬಳಕೆ ಎಷ್ಟಿದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿಯನ್ನು ನಾಳೆ ಸಲ್ಲಿಸುವಂತೆ ಸುಪ್ರೀಂ ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ.