ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ದೆಹಲಿ ಗ್ಯಾಂಗ್ ರೇಪ್ ಪ್ರಕರಣದ 6ನೇ ಆರೋಪಿ ಬಾಲಾಪರಾಧಿ

ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ 6ನೇ ಆರೋಪಿ ಅಪ್ರಾಪ್ತ ಎಂದು ಬಾಲಾಪರಾಧಿ ನ್ಯಾಯಮಂಡಳಿ ಹೇಳಿದೆ.

Rashmi Kasaragodu
Updated On : 28 Jan 2013, 4:52 am

ನವದೆಹಲಿ: ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ 6ನೇ ಆರೋಪಿ ಅಪ್ರಾಪ್ತ ಎಂದು ಬಾಲಾಪರಾಧಿ ನ್ಯಾಯಮಂಡಳಿ ಹೇಳಿದೆ.

ಡಿ.16ರಂದು ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರದಲ್ಲಿನ 6ನೇ ಆರೋಪಿಯ ವಯಸ್ಸು ಪರೀಕ್ಷೆ ಮಾಡುವ ಸಲುವಾಗಿ ಇದೀಗ ಮೂಳೆ ಪರೀಕ್ಷೆಗೊಳಪಡಿಸಲಾಗುವುದು.

ಪ್ರಸ್ತುತ ಪ್ರಕರಣದಲ್ಲಿ ಅತೀ ಕ್ರೂರವಾಗಿ ವರ್ತಿಸಿದ್ದ ಈ ಆರೋಪಿ, ತಾನು ಅಪ್ರಾಪ್ತ ಎಂದು ಸಾಬೀತು ಪಡಿಸಲು ತನ್ನ ಶಾಲಾ ದಾಖಲಾತಿಗಳನ್ನು ಬಾಲಾಪರಾಧಿ ನ್ಯಾಯ ಮಂಡಳಿಗೆ ಸಲ್ಲಿಸಿದ್ದನು ಎಂದು ಬಲ್ಲಮೂಲಗಳು ಹೇಳಿವೆ.

ಅದೇ ವೇಳೆ ಈ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಆತನ ಶಾಲಾ ಪ್ರಾಂಶುಪಾಲರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಶಾಲಾ ದಾಖಲಾತಿಯ ಪ್ರಕಾರ 6ನೇ ಆರೋಪಿಯ ಜನ್ಮದಿನಾಂಕ ಜೂನ್ 4, 1995. ಅಂದರೆ ಈಗ ಆತನ ವಯಸ್ಸು 17 ವರ್ಷ, 6 ತಿಂಗಳು, 11 ದಿನ. ಆದುದರಿಂದ ಆತ ಅಪ್ರಾಪ್ತ ಎಂದು ಮಂಡಳಿ ಘೋಷಿಸಿದೆ.

ಒಂದು ವೇಳೆ ವೈದ್ಯಕೀಯ ಪರೀಕ್ಷೆ ಮೂಲಕ ಆತನ ವಯಸ್ಸು ನಿರ್ಣಯ ಮಾಡಬೇಕೆಂದು ಸರ್ಕಾರ ಆದೇಶಿಸಿದರೆ, ಆತನನ್ನು ಮೂಳೆ ಎಕ್ಸ್‌ರೇ ಮತ್ತು ಡೆಂಟಲ್ ಟೆಸ್ಟ್‌ಗೆ ಒಳಪಡಿಸಲಾಗುವುದು ಎಂದು ತಜ್ಞರು ಹೇಳಿದ್ದಾರೆ.

 ಈತ ಪ್ರಸ್ತುತ ಪ್ರಕರಣದಲ್ಲಿ ಆರೋಪಿಯಾಗಿದ್ದರೂ, ಬಾಲಾಪರಾಧಿ ಎಂದು ಘೋಷಿಸಿದ ಕಾರಣ ಈತನಿಗೆ ಗರಿಷ್ಠ ಅಂದರೆ 3 ವರ್ಷ ಶಿಕ್ಷೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement