ಬಿಜೆಪಿ ಸರ್ಕಾರ ಉರುಳಿಸುವ ಉದ್ದೇಶವಿಲ್ಲ: ಬಿಎಸ್ವೈ
ಬಿಎಸ್ವೈ ನಿಷ್ಠರಾದ 13 ಶಾಸಕರು ಶೆಟ್ಟರ್ ಸರ್ಕಾರದಿಂದ ರಾಜಿನಾಮೆ ನೀಡಿ ಹೊರನಡೆಯಲು ಸಿದ್ಧರಾಗಿರುವ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ...
ಬೆಂಗಳೂರು: ಬಿಎಸ್ವೈ ನಿಷ್ಠರಾದ 13 ಶಾಸಕರು ಶೆಟ್ಟರ್ ಸರ್ಕಾರದಿಂದ ರಾಜಿನಾಮೆ ನೀಡಿ ಹೊರನಡೆಯಲು ಸಿದ್ಧರಾಗಿರುವ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ತನಗೆ ಶೆಟ್ಟರ್ ಸರ್ಕಾರವನ್ನು ಉರುಳಿಸುವ ಉದ್ದೇಶವಿಲ್ಲ ಎಂದು ಹೇಳಿದ್ದಾರೆ. ಅದೇ ವೇಳೆ ಫೆ.8ಕ್ಕೆ ನಡೆಯಲಿರುವ ಬಜೆಟ್ ಮಂಡನೆಗೆ ಅಡ್ಡಿ ಪಡಿಸುವುದಿಲ್ಲ ಎಂದು ಹೇಳಿದ್ದಾರೆ.
2 ತಿಂಗಳ ಹಿಂದೆ ಬಿಜೆಪಿ ತೊರೆದು ಹೋಗಿದ್ದ ಬಿಎಸ್ವೈ ತನಗೆ ಬಿಜೆಪಿ ಸರ್ಕಾರವನ್ನು ಉರುಳಿಸುವ ಗುರಿ ಇಲ್ಲ ಎಂದು ಹೇಳಿದ್ದಾರೆ.
ಒಂದು ವೇಳೆ ನನಗೆ ಸರ್ಕಾರನ್ನು ಉರುಳಿಸಬೇಕು ಎಂಬ ಉದ್ದೇಶವಿದ್ದಿದ್ದರೆ ಡಿಸೆಂಬರ್ 9 (ಬಿಎಸ್ವೈ ನೂತ ಪಕ್ಷ ಕೆಜೆಪಿ ಸ್ಥಾಪನೆಯಾದ ದಿನ) ರಂದು ಬಿಜೆಪಿ ಶಾಸಕರ ರಾಜಿನಾಮೆ ಕೊಡಿಸಬಹುದಾಗಿತ್ತು.
13 ಶಾಸಕರು ಇದೀಗ ರಾಜಿನಾಮೆ ಕೊಡಲು ಮುಂದೆ ಬಂದಿರುವ ಬಗ್ಗೆ ಮಾತನಾಡಿದ ಬಿಎಸ್ವೈ, ಚುನಾವಣೆ ಹತ್ತಿರ ಬರುತ್ತಿರುವ ಕಾರಣ ಈ ಶಾಸಕರು ಕೆಜೆಪಿಯನ್ನು ಬಲ ಪಡಿಸುವುದಕ್ಕಾಗಿ ಬಿಜೆಪಿ ತೊರೆಯಲು ತೀರ್ಮಾನಿಸಿದ್ದಾರೆಯೇ ಹೊರತು ಸರ್ಕಾರ ಬೀಳಿಸುವುದಕ್ಕಲ್ಲ.
ಒಂದು ವೇಳೆ ಬಜೆಟ್ ಮಂಡನೆಗೂ ಅಡ್ಡಿಪಡಿಸಬೇಕೆಂದಿದ್ದರೆ ನಾನು 20 ಶಾಸಕರು ರಾಜಿನಾಮೆ ನೀಡುವಂತೆ ಹೇಳುತ್ತಿದೆ. ಆದರೆ ನಮಗೆ ಇದ್ಯಾವ ಉದ್ದೇಶವೂ ಇಲ್ಲ ಎಂದು ಬಿಎಸ್ವೈ ಹೇಳಿದ್ದಾರೆ.