ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರೆ ಬಿಜೆಪಿಗೆ ಲಾಭ : ಯಶ್ವಂತ್ ಸಿನ್ಹಾ

ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದರೆ ಅದರಿಂದ ಬಿಜೆಪಿಗೆ ಲಾಭ ಆಗಲಿದೆ ಎಂದು ಬಿಜೆಪಿಯ ಹಿರಿಯ ನಾಯಕ ಯಶ್ವಂತ್ ಸಿನ್ಹಾ ಹೇಳಿದ್ದಾರೆ....

Rashmi Kasaragodu
Updated On : 28 Jan 2013, 7:31 am

ನವದೆಹಲಿ: ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದರೆ ಅದರಿಂದ ಬಿಜೆಪಿಗೆ ಲಾಭ ಆಗಲಿದೆ ಎಂದು ಬಿಜೆಪಿಯ ಹಿರಿಯ ನಾಯಕ ಯಶ್ವಂತ್ ಸಿನ್ಹಾ ಹೇಳಿದ್ದಾರೆ.

2014ರ ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನೇ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಪಕ್ಷದ ಇತರ ಕಾರ್ಯಕರ್ತರ ಆಗ್ರಹವಾಗಿದೆ. ಅದನ್ನೇ ನಾನು ಪುನರುಚ್ಚರಿಸಿದ್ದೇನೆ ಎಂದು ಸಿನ್ಹಾ ಹೇಳಿದ್ದಾರೆ.

ಎಲ್ಲ ವಿದ್ಯಮಾನಗಳನ್ನು ಗಮನಿಸಿದರೆ, ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವುದು ಸೂಕ್ತ. ಇದರಿಂದ ಬಿಜೆಪಿಗೆ ಲಾಭವಾಗಲಿದೆ ಎಂದು ಅವರು ಹೇಳಿದ್ದಾರೆ.

ಆದಾಗ್ಯೂ, ಮೋದಿಯವರ ಕೋಮುವಾದ ನಿಲುವಿನ ಬಗ್ಗೆ ಜೆಡಿ(ಯು) ಅಸಮಧಾನ ವ್ಯಕ್ತ ಪಡಿಸಿರುವ ಬಗ್ಗೆ ನೀವೇನಂತೀರಿ?ಎಂದು ಸಿನ್ಹಾ ಅವರಲ್ಲಿ ಕೇಳಿದಾಗ, ಜೆಡಿಯು ಬಿಜೆಪಿಯ ಹಳೆಯ ಮಿತ್ರಪಕ್ಷವಾಗಿದೆ. ಆದರೆ ಜೆಡಿಯು ಬಿಜೆಪಿಯನ್ನು ಜಾತ್ಯಾತೀತ ಎಂದು ಹೇಳಿ, ಅದರಲ್ಲಿ ಒಬ್ಬರು ಮಾತ್ರ ಕೋಮುವಾದಿ ಅಂತ ಹೇಳುವುದು ಸರಿಯಲ್ಲ.

ಒಂದು ವೇಳೆ ಸಂದರ್ಭಗಳ ಒತ್ತಡದಿಂದ ಜೆಡಿಯು ಎನ್‌ಡಿಎ ಇಂದ ದೂರ ಸರಿದರೆ, ಒಂದು ಪಕ್ಷ ಬಿಟ್ಟು ಹೋಗುವಾಗ ಇನ್ನು ಹಲವಾರು ಪಕ್ಷಗಳು ನಮ್ಮೊಂದಿಗೆ ಸೇರುತ್ತವೆ ಎಂದು ಸಿನ್ಹಾ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement