13 ಶಾಸಕರಲ್ಲಿ ಇಬ್ಬರ ರಾಜಿನಾಮೆ ಅಂಗೀಕಾರ
ಇಂದು ಬೆಳಗ್ಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ 13 ಬಿಜೆಪಿ ಶಾಸಕರ ಪೈಕಿ ಇಬ್ಬರ ರಾಜಿನಾಮೆ ಅಂಗೀಕಾರ...
ಬೆಂಗಳೂರು: ಇಂದು ಬೆಳಗ್ಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ 13 ಬಿಜೆಪಿ ಶಾಸಕರ ಪೈಕಿ ಇಬ್ಬರ ರಾಜಿನಾಮೆಯನ್ನು ಮಾತ್ರ ಸ್ಪೀಕರ್ ಕೆ.ಜೆ.ಬೋಪಯ್ಯ ಅವರು ಅಂಗೀಕರಿಸಿದ್ದಾರೆ.
ಚಳ್ಳಕೆರೆ ಶಾಸಕ ತಿಪ್ಪೇಸ್ವಾಮಿ ಹಾಗೂ ವಿಠಲ ಕಠಕದೊಂಡ ಅವರ ರಾಜಿನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದಾರೆ. ಬಿಜೆಪಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ನೀಡಿದ್ದ ದೂರಿನಲ್ಲಿ ಈ ಇಬ್ಬರು ಶಾಸಕರ ಹೆಸರು ಇಲ್ಲದ ಹಿನ್ನೆಲೆಯಲ್ಲಿ ಅವರ ರಾಜಿನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದಾರೆ ಎನ್ನಲಾಗಿದೆ.
ರಾಜಿನಾಮೆ ನೀಡಲು ಮುಂದಾಗಿರುವ 12 ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅನರ್ಹಗೊಳಿಸಬೇಕು ಎಂದು ಕೋರಿ ಶಾಸಕರಾದ ಬೇಳೂರು ಗೋಪಾಲಕೃಷ್ಣ ಮತ್ತು ಎಂ.ವಿ.ನಾಗರಾಜ್ ಅವರು ನಿನ್ನೆ ವಿಧಾಸಭೆ ಕಾರ್ಯದರ್ಶಿಗಳಿಗೆ ದೂರು ನೀಡಿದ್ದರು.