5 ಎಂಎಲ್ಸಿಗಳ ವಿರುದ್ಧವೂ ದೂರು
ನಿನ್ನೆಯಷ್ಟೇ 12 ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕೋರಿ ವಿಧಾನಸಭೆ ಕಾರ್ಯದರ್ಶಿಗೆ ದೂರು ನೀಡಿದ್ದ ಶಾಸಕ ಬೇಳೂರು....
ಬೆಂಗಳೂರು: ನಿನ್ನೆಯಷ್ಟೇ 12 ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕೋರಿ ವಿಧಾನಸಭೆ ಕಾರ್ಯದರ್ಶಿಗೆ ದೂರು ನೀಡಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ಇಂದು ಐವರು ವಿಧಾನ ಪರಿಷತ್ ಸದಸ್ಯರ ವಿರುದ್ಧವೂ ದೂರು ನೀಡಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಮೋಹನ್ ಲಿಂಬಿಕಾಯಿ, ಭಾರತಿ ಶೆಟ್ಟಿ, ಮುಮ್ತಾಜ್ ಅಲಿಖಾನ್, ಬಿ.ಜೆ ಪುಟ್ಟಸ್ವಾಮಿ ಹಾಗೂ ಶಿವರಾಜ್ ಸಜ್ಜನ್ ಅವರನ್ನು ಅನರ್ಹಗೊಳಿಸಬೇಕು ಎಂದು ವಿಧಾನ ಪರಿಷತ್ ಕಾರ್ಯದರ್ಶಿ ಶ್ರೀಶ ಅವರಿಗೆ ಗೋಪಾಲಕೃಷ್ಣ ದೂರು ನೀಡಿದ್ದಾರೆ.
ಈ ವೇಳೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಸಂಸದರಾದ ಬಿ.ವೈ ರಾಘವೇಂದ್ರ, ಶಿವಕುಮಾರ್ ಉದಾಸಿ ಹಾಗೂ ಜೆ.ಎಸ್.ಬವಸರಾಜ್ ಅವರ ವಿರುದ್ಧವೂ ಲೋಕಸಭಾ ಸ್ಪೀಕರ್ಗೆ ದೂರು ನೀಡುವುದಾಗಿ ತಿಳಿಸಿದರು.