ಪ್ರಧಾನಿ ಅಭ್ಯರ್ಥಿ: ಸುಷ್ಮಾಗೆ ಬೆಂಬಲಿಸಿದ ಶಿವಸೇನೆ
ಮುಂಬೈ: ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ಮುಂದಿನ ಎನ್ಡಿಎ ಪ್ರಧಾನಿ ಅಭ್ಯರ್ಥಿಯಾಗಿ ಶಿವಸೇನಾ ಬೆಂಬಲ ಸೂಚಿಸಿದೆ.
ನಿನ್ನೆಯಷ್ಟೆ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಅವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಹೇಳಿದ ಬೆನ್ನಲ್ಲೆ ಮಂಗಳವಾರ ಶಿವಸೇನಾ, ಸುಷ್ಮಾ ಸ್ವರಾಜ್ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬೆಂಬಲ ಸೂಚಿಸಿದೆ.
ಬಿಜೆಪಿ ನಾಯಕಿ ಸುಷ್ಮ ಸ್ವರಾಜ್ ಅವರು ಪ್ರಧಾನಿ ಸ್ಥಾನಕ್ಕೆ ಸೂಕ್ತ ಎಂದು ಶಿವ ಸೇನಾ ವಕ್ತಾರ, ಎಂಪಿ, ಸಂಜಯ್ ರಾಟ್ ಹೇಳಿದ್ದಾರೆ. ದಿವಂಗತ ಬಾಳ ಠಾಕ್ರೆ ಅವರು ಕೂಡ ಸುಷ್ಮಾ ಸ್ವರಾಜ್ ಅವರನ್ನೇ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದರು ಎಂದು ಹೇಳಿದ್ದಾರೆ.