ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಶಾರೂಖ್ ಖಾನ್‌ಗೆ ಭಾರತ ಸರ್ಕಾರ ಭದ್ರತೆ ಕಲ್ಪಿಸಬೇಕು: ಪಾಕ್

ಬಾಲಿವುಡ್ ಸ್ಟಾರ್ ಶಾರೂಖ್ ಖಾನ್‌ಗೆ ಭಾರತ ಸರ್ಕಾರ ಬಿಗಿ ಭದ್ರತೆ ಕಲ್ಪಿಸಬೇಕು ಎಂದು ಪಾಕಿಸ್ತಾನದ ಆಂತರಿಕ ಸಚಿವ ರೆಹಮಾನ್ ಮಲಿಕ್ ಹೇಳಿದ್ದಾರೆ.

Mainashree
Updated On : 29 Jan 2013, 4:43 am

ಇಸ್ಲಾಮಾಬಾದ್: ಬಾಲಿವುಡ್ ಸ್ಟಾರ್ ಶಾರೂಖ್  ಖಾನ್‌ಗೆ  ಭಾರತ ಸರ್ಕಾರ ಬಿಗಿ ಭದ್ರತೆ ಕಲ್ಪಿಸಬೇಕು ಎಂದು ಪಾಕಿಸ್ತಾನದ ಆಂತರಿಕ ಸಚಿವ ರೆಹಮಾನ್ ಮಲಿಕ್ ಮಂಗಳವಾರ ಹೇಳಿದ್ದಾರೆ.

ಶಾರೂಖ್ ಅವರು ಪಾಕಿಸ್ತಾನ ಮತ್ತು ಭಾರತದ ನಾಗರಿಕರನ್ನು ಪ್ರಿತೀಸುತ್ತಾರೆ. ಆದರೆ ಅವರ ವಿರುದ್ಧ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಶಾರೂಖ್ ಅವರಿಗೆ ಬೆದರಿಕೆ ಹಾಕುವ ಪ್ರಯತ್ನಗಳು ನಡೆಯುತ್ತಿವೆ. ಆದ್ದರಿಂದ ಅವರಿಗೆ ಭಾರತ ಸರ್ಕಾರ ಬಿಗಿ ಭದ್ರತೆ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ.

ಶಾರೂಖ್ ಅವರು ಭಾರತೀಯರಾಗಿ ಜನಸಿದ್ದು, ಭಾರತೀಯರಾಗೇ ಉಳಿಯುವರು.  ಭಾರತದ ಸಹೋದರ ಮತ್ತು ಸಹೋದರಿಯರು ಅವರನ್ನು ತಪ್ಪಾಗಿ ತಿಳಿದುಕೊಳ್ಳಬಾರದು, ಶಾರೂಖ್ ಅತ್ಯುತ್ತಮ ನಟ, ಅವರು ಒಗ್ಗಟ್ಟಿನ ಸಂದೇಶ ಸಾರುತ್ತಾರೆ. ದಯವಿಟ್ಟು ಅವರಿಗೆ ರಕ್ಷಣೆ ನೀಡಿ ಎಂದು ಮಲಿಕ್ ಮನವಿ ಮಾಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಒಗ್ಗಟ್ಟಾಗಿ ಭಯೋತ್ಪಾದನೆ ವಿರುದ್ಧ ಹೋರಾಡಬೇಕು. ಉಭಯ ದೇಶಗಳ ಶಾಂತಿಗಾಗಿ ಶ್ರಮಿಸಬೇಕು ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement