ಕನಸಾಗೆ ಉಳಿದ ಜೆಪಿ ಕನಸು: ನಿತೀಶ್
ಪಾಟ್ನಾ: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹೇಳಿದಂತೆ ಜಯಪ್ರಕಾಶ್ ನಾರಾಯಣ್(ಜೆಪಿ) ಅವರ ಕನಸು ಕನಸಾಗೆ ಉಳಿದಿದೆ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬುಧವಾರ ಹೇಳಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಕೈಗೊಂಡಿರುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಅಣ್ಣಾ ಅವರ ಹೋರಾಟ ಜೆಪಿ ಅವರ ಹೋರಾಟಕ್ಕೆ ಪರ್ಯಾಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಯಪ್ರಕಾಶ್‌ನಾರಾಯಣ್ ಅವರ ಚಳುವಳಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ. 1974ರಲ್ಲಿ ಸಂಭವಿಸಿದ ನಿರುದ್ಯೋಗ, ಹಣದುಬ್ಬರ, ಬೆಲೆ ಏರಿಕೆ ಮತ್ತು ಆರ್ಥಿಕ ಅಸ್ಥಿರತೆಯನ್ನು ಖಂಡಿಸಿ ಹೋರಾಟ ನಡೆಸಿದ ಸಂದರ್ಭದಲ್ಲಿ ಹುಟ್ಟಿಕೊಂಡ ಜಯಪ್ರಕಾಶ್ ನಾರಾಯಣ್ ಅವರ ಸಂಪೂರ್ಣ ಕ್ರಾಂತಿಯ ಧ್ಯೇಯೋದ್ದೇಶಗಳು ಪ್ರಜಾತಾಂತ್ರಿಕವಾಗಿಯಿತ್ತು. ಆದರೆ ಜೆಪಿಯವರ ಕನಸು ಕನಸಾಗಿ ಉಳಿದಿದೆ.
ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿದ ನಿತೀಶ್ ಕುಮಾರ್ ಅವರು ನಾವು ಭ್ರಷ್ಟಚಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಿದೆ ಎಂದಿದ್ದಾರೆ. ನಾನು ವಿಧ್ಯಾರ್ಥಿನಾಯಕನಾಗಿದ್ದಾಗೆ ಜೆಪಿ ಚಳುವಳಿಯಲ್ಲಿ ಭಾಗವಹಿಸಿದ್ದೇನೆ ಎಂದು ಅವರು ಹೇಳಿದ್ದಾರೆ.