ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ನೀರ್ ದೋಸೆ' ಚಿತ್ರದಿಂದ ರಮ್ಯಾ ಔಟ್

'ನೀರ್ ದೋಸೆ' ಚಿತ್ರದ ನಾಯಕಿಯಾಗಿದ್ದ ನಟಿ ರಮ್ಯಾ ಅವರು, ತಾವು ಚಿತ್ರದಿಂದ ಹೊರ ಬಂದಿರುವುದಾಗಿ ಟ್ವೀಟ್ ಮಾಡಿದ್ದಾರೆ.

Lingaraj Badiger
Updated On : 30 Jan 2013, 2:30 am

ಬೆಂಗಳೂರು: 'ನೀರ್ ದೋಸೆ' ಚಿತ್ರದ ನಾಯಕಿಯಾಗಿದ್ದ ನಟಿ ರಮ್ಯಾ ಅವರು, ತಾವು ಚಿತ್ರದಿಂದ ಹೊರ ಬಂದಿರುವುದಾಗಿ ಟ್ವೀಟ್ ಮಾಡಿದ್ದಾರೆ.

ಚಿತ್ರದ ಒಂದು ಲೈನ್ ಸ್ಟೋರಿ ಕೇಳಿ ನಾಯಕಿ ಪಾತ್ರ ಒಪ್ಪಿಕೊಂಡಿದ್ದ ರಮ್ಯಾ, ಇದೀಗ ದಿಢೀರ್ ಅಂತ ತಮ್ಮ ನಿರ್ಧಾರ ಬದಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಚಿತ್ರದ ಸ್ಕ್ರಿಫ್ಟ್ ನನಗೆ ಇಷ್ಟವಾಯಿತು. ಆದರೆ ಆ ಪಾತ್ರಕ್ಕೆ ನಾನು ನ್ಯಾಯ ಒದಗಿಸುತ್ತೇನೆ ಎಂದು ನನಗೆ ಅನ್ನಿಸಲಿಲ್ಲ. ಹೀಗಾಗಿ ತಾವು ಚಿತ್ರದಿಂದ ಹೊರ ಬಂದಿರುವುದಾಗಿ ಬರೆದುಕೊಂಡಿದ್ದಾರೆ.

ಇನ್ನು ರಮ್ಯಾ ಚಿತ್ರದಿಂದ ಹೊರ ಬಂದಿರುವುದನ್ನು ನಿರ್ದೇಶಕ ವಿಜಯ್ ಪ್ರಸಾದ್ ಅವರು ಖಚಿತಪಡಿಸಿದ್ದಾರೆ. ಆದರೆ ರಮ್ಯಾ ಅವರ ವರ್ತನೆ ಬಗ್ಗೆ ಚಿತ್ರ ನಿರ್ಮಾಪಕ ಸುಧಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದು, ರಮ್ಯಾ ಈ ಚಿತ್ರಕ್ಕಾಗಿ 15 ಲಕ್ಷ ರುಪಾಯಿ ಅಡ್ವಾನ್ಸ್ ಸಹ ಪಡೆದುಕೊಂಡಿದ್ದರು ಎಂದು ಹೇಳಿದ್ದಾರೆ.

ಸುಧಿ ಅವರು ತಮ್ಮ ಮೊದಲ ಚಿತ್ರ 'ಸಿದ್ಲಿಂಗು'ದಲ್ಲಿ ನಾಯಕಿಯಾಗಿದ್ದ ರಮ್ಯಾ ಅವರನ್ನೇ ತಮ್ಮ ಎರಡನೇ ಚಿತ್ರ 'ನೀರ್ ದೋಸೆ'ಗೂ ಆಯ್ಕೆ ಮಾಡಿದ್ದರು. ಆದರೆ ಈ ಚಿತ್ರದಲ್ಲಿ ನಾಯಕಿ ವೇಶ್ಯೆಯಾಗಿರುತ್ತಾಳೆ. ಹೀಗಾಗಿ ವೇಶ್ಯೆ ಪಾತ್ರ ಮಾಡಿದರೆ ತಮ್ಮ ಗೌರವಕ್ಕೆ ಧಕ್ಕೆ ಬರುಬಹುದು ಎಂಬ ಕಾರಣಕ್ಕೆ ರಮ್ಯಾ ನಿರ್ಧಾರ ಬದಲಿಸಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement