ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಶರದ್ ಪವಾರ್ ಪ್ರಧಾನಿಯಾಗಲಿ: ಎನ್‌ಸಿಪಿ

Rashmi Kasaragodu
Updated On : 30 Jan 2013, 4:32 am


ನವದೆಹಲಿ: ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ಯುಪಿಎ ಒಂದೆಡೆ ಯತ್ನಿಸುತ್ತಿದ್ದರೆ, ಇತ್ತ ಎನ್‌ಸಿಪಿ ತಾವು ಶರದ್ ಪವಾರ್ ಅವರನ್ನು ಪ್ರಧಾನಿ ಪಟ್ಟಕ್ಕೇರಿಸಲು ಬಯಸುತ್ತೇವೆ ಎಂದು ಹೇಳಿದೆ.

ರಾಹುಲ್ ಗಾಂಧಿ ಯುಪಿಎ ಪ್ರಧಾನಿ ಅಭ್ಯರ್ಥಿಯೇ? ಎಂದು ಎನ್‌ಸಿಪಿ ವಕ್ತಾರ ಡಿಪಿ ತ್ರಿಪಾಠಿ ಅವರಲ್ಲಿ ಕೇಳಿದಾಗ ಈ ಬಗ್ಗೆ ಕಾಂಗ್ರೆಸ್ ನಿರ್ಧರಿಸುತ್ತದೆ ಎಂದು ಅವರು ಉತ್ತರಿಸಿದ್ದಾರೆ.

ಅದೇ ವೇಳೆ ಶರದ್ ಪವಾರ್ ಪರ ಬ್ಯಾಟಿಂಗ್ ಮಾಡಿದ ತ್ರಿಪಾಠಿ, ದೇಶದ ಜನರು ಪವಾರ್‌ನ್ನು ಪ್ರಧಾನಿಯಾಗಿ ಕಾಣಲು ಬಯಸುತ್ತಾರೆ. ಅವರು ಪುಟ್ಟ ಪಕ್ಷವೊಂದರ ದೊಡ್ಡ ನಾಯಕ.
ಅವರು ಪ್ರಧಾನಿಯಾಗಲು ಸಾಧ್ಯತೆಯಿದೆ ಎಂಬ ಮಾತನ್ನು ತಳ್ಳಿ ಹಾಕುವಂತಿಲ್ಲ. ನಾವು ಅವರನ್ನು ಪ್ರಧಾನಿ ಮಾಡಬೇಕೆಂದು ಬಯಸುತ್ತೇನೆ, ಈ ನಿಟ್ಟಿನಲ್ಲಿ ಯೋಜನೆಯನ್ನೂ ರೂಪಿಸಿದ್ದೇವೆ. ಆದರೆ ಇದಕ್ಕೆ ಹಲವಾರು ಅಡೆತಡೆಗಳಿವೆ ಎಂದು ಹೇಳಿದ್ದಾರೆ.

ಏತನ್ಮಧ್ಯೆ, ತೃತೀಯ ಒಕ್ಕೂಟ ರೂಪಿಸಲು ಎನ್‌ಸಿಪಿ ತಯಾರಾಗಿದೆ ಎಂಬ ಸುದ್ದಿಯನ್ನು ತ್ರಿಪಾಠಿ ತಳ್ಳಿ ಹಾಕಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement