ಸಲ್ಮಾನ್ ರಶ್ದಿ ಅವರ ಕೊಲ್ಕತ್ತಾ ಭೇಟಿ ರದ್ದು
ಕೊಲ್ಕತ್ತಾ: ಭದ್ರತಾ ಕೊರತೆಯಿಂದಾಗಿ ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಅವರ ಕೊಲ್ಕತ್ತಾ ಭೇಟಿಯನ್ನು ಬುಧವಾರ ರದ್ದುಗೊಳಿಸಲಾಗಿದೆ.
ನಿರ್ದೇಶಕಿ ದೀಪಾ ಮೆಹ್ತಾ ಅವರು ರಶ್ದಿ ಅವರ 'ಮಿಡ್ ನೈಟ್ ಚಿಲ್ಡ್ರನ್' ಪುಸ್ತಕ ಆಧಾರಿತ ಚಲನಚಿತ್ರವನ್ನು ಹೊರತರುತ್ತಿದ್ದು, ಚಿತ್ರದ ಪ್ರಚಾರಕ್ಕಾಗಿ ಸಲ್ಮಾನ್ ರಶ್ದಿ ಅವರು ಕೊಲ್ಕತ್ತಾಗೆ ಆಗಮಿಸಬೇಕಿತ್ತು. ಆದರೆ ಭದ್ರತಾ ಕೊರತೆಯಿಂದಾಗಿ ಅವರ ಭೇಟಿಯನ್ನು ರದ್ದುಗೊಳಿಸಲಾಗಿದೆ.
ರಶ್ದಿ ಅವರು ಇಲ್ಲಿಗೆ ಭೇಟಿ ನೀಡುತ್ತಿರುವುದು ನಮಗೆ ತಿಳಿದಿರಲಿಲ್ಲ. ಭದ್ರತಾ ಪ್ರಸ್ತುತ ಭದ್ರತಾ ಕೊರತೆ ಇರುವುದರಿಂದ ಅವರ ಭೇಟಿಯನ್ನು ರದ್ದು ಮಾಡಲಾಗಿದೆ ಎಂದು ಜಂಟಿ ಪೊಲೀಸ್ ಆಯ್ತುಕ ಜಾವೇದ್ ಶಮಿಮ್ ಹೇಳಿದ್ದಾರೆ.
ರಶ್ದಿ ಅವರು ಕೊಲ್ಕತ್ತಾಗೆ ಆಗಮಿಸುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ, ಕೊಲ್ಕತಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ಆರಂಭಿಸಿದವು. ಏರ್ ಪೋರ್ಟ್ ಪೊಲೀಸರು ಲೇಖಕ ರಶ್ದಿ ಅವರು ಆಗಮಿಸುತ್ತಿಲ್ಲ ಎಂದು ಹೇಳಿದ ನಂತರ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಿಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.