ಕಮಲ್ ಗೆ ಸಲ್ಲು ಬೆಂಬಲ
ಕಮಲ್ ಹಾಸನ್ ರ ವಿಶ್ವರೂಪಂ ಚಿತ್ರದ ವಿರುದ್ಧ ನಿಷೇಧ ಹೇರಿರುವುದನ್ನು ಖಂಡಿಸಿರುವ ಬಾಲಿವುಡ್ ನಟ ಸಲ್ಮಾನ್ ಖಾನ್, ಕಮಲ್ ಹಾಸನ್ ಗೆ ಬೆಂಬಲ ಸೂಚಿಸಿದ್ದಾರೆ...
ಮುಂಬೈ: ಕಮಲ್ ಹಾಸನ್ ರ ವಿಶ್ವರೂಪಂ ಚಿತ್ರದ ವಿರುದ್ಧ ನಿಷೇಧ ಹೇರಿರುವುದನ್ನು ಖಂಡಿಸಿರುವ ಬಾಲಿವುಡ್ ನಟ ಸಲ್ಮಾನ್ ಖಾನ್, ಕಮಲ್ ಹಾಸನ್ ಗೆ ಬೆಂಬಲ ಸೂಚಿಸಿದ್ದಾರೆ.
ವಿಶ್ವರೂಪಂಗೆ ಬಿಡುಗಡೆಗೆ ತಮಿಳ್ನಾಡು ಸರ್ಕಾರ ನಿಷೇಧ ಹೇರಿದ್ದು, ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಲೇರಿದ್ದ ಕಮಲ್ ಗೆ ಹೈಕೋರ್ಟ್ ಚಿತ್ರ ಬಿಡುಗಡೆ ಮಾಡುವಂತೆ ಆದೇಶ ನೀಡಿತ್ತು.
ಇದೀಗ ಕಮಲ್ ಗೆ ಟ್ವಿಟರ್ ಮೂಲಕ ಬೆಂಬಲ ಸೂಚಿಸಿರುವ ಸಲ್ಮಾನ್ ಖಾನ್, ಕಲೆ, ಕಲಾವಿದ, ಪ್ರೇಕ್ಷಕರನ್ನು ಗೌರವಿಸಿ. ನಾನು ಕಮಲ್ ಹಾಸನ್ ಗೆ ಬೆಂಬಲ ನೀಡುತ್ತೇನೆ. ಸೆನ್ಸಾರ್ ಮಂಡಳಿ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದೆ ಅಲ್ವಾ? ನಾನು ಸಿನಿಮಾ ನೋಡಬೇಕಾಗಿದೆ ಎಂದಿದ್ದಾರೆ.
ಸಿನಿಮಾ ಚೆನ್ನಾಗಿದೆಯೋ ಇಲ್ಲವೋ ಎಂಬುದನ್ನು ಪ್ರೇಕ್ಷಕರು ತೀರ್ಮಾನಿಸಬೇಕಾಗಿದೆ. ನೋಡಿ, ಎರಡೇ ವಿಧದ ಸಿನಿಮಾಗಳಿರುವುದು. ಒಂದು ಒಳ್ಳೆಯದು ಇನ್ನೊಂದು ಕೆಟ್ಟದ್ದು. ಒಂದು ಹಿಟ್ ಆದರೆ ಇನ್ನೊಂದು ಫ್ಲಾಪ್. ಆದರೆ ಇದನ್ನು ತೀರ್ಮಾನಿಸುವವರು ಸಿನಿಮಾ ಟಿಕೆಟ್ ತೆಗೆದುಕೊಂಡು ನೋಡುವ ಪ್ರೇಕ್ಷಕರು ಎಂದು ಸಲ್ಲು ಟ್ವೀಟ್ ಮಾಡಿದ್ದಾರೆ.
ವಿಶ್ವರೂಪಂ ಬಿಡುಗಡೆ ಮಾಡಿ ಎಂದು ಹೇಳಿರುವ ಹೈಕೋರ್ಟ್ ಆದೇಶವನ್ನು ತಮಿಳ್ನಾಡು ಸರ್ಕಾರ ಪ್ರಶ್ನಿಸಿದ್ದು, ಇದೀಗ ಕಮಲ್ ಹಾಸನ್ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಲು ತೀರ್ಮಾನಿಸಿದ್ದಾರೆ.