ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪರಿಷ್ಕೃತ ಲೋಕಪಾಲ್ ಮಸೂದೆಗೆ ಕೇಜ್ರಿವಾಲ್ ವಿರೋಧ

Mainashree
Updated On : 31 Jan 2013, 5:07 am

ನವದೆಹಲಿ: ಕೇಂದ್ರ ಸಚಿವ ಸಂಪುಟದಲ್ಲಿ ಲೋಕಪಾಲ ತಿದ್ದುಪಡಿ ಮಸೂದೆಗೆ ಸಮ್ಮತಿ ದೊರೆಯುತ್ತಿದ್ದಂತೆ, ಇತ್ತ ಅರವಿಂದ್ ಕೇಜ್ರಿವಾಲ್ ಲೋಕಪಾಲ್ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.


ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಅಂಗೀಕಾರವಾಗಿರುವ ಲೋಕಪಾಲ ತಿದ್ದುಪಡಿ ಮಸೂದೆ ಪ್ರಬಲವಾಗಿಲ್ಲ. ಇದು ಪರಿಷ್ಕೃತ ಲೋಕಪಾಲ ಮಸೂದೆಯಾಗಿಲ್ಲ ಎಂದು ದೂರಿದ್ದಾರೆ.

ಕೇಂದ್ರ ಸರ್ಕಾರ ಮುಂದಿನ ಲೋಕಸಭಾ ಅಧಿವೇಶನದಲ್ಲಿ ಮಂಡಿಸಲಿರುವ ಈ ಮಸೂದೆ ಭ್ರಷ್ಟಾಚಾರವನ್ನು ತಡೆಯುವುದಿಲ್ಲ. ಕೇಂದ್ರ ಸರ್ಕಾರದ ಈ ಮಸೂದೆ ಭ್ರಷ್ಟ ಸಚಿವರ ರಕ್ಷಣೆ ಮಾಡುವಲ್ಲಿ ಹೆಚ್ಚಾಗಿ ಕಾರ್ಯ ನಿರ್ವಹಿಸಲಿದೆ ಎಂದು ವ್ಯಂಗ್ಯವಾಡಿದ್ದಾರೆ.

ಲೋಕಪಾಲ್ ಎಂಬ ಕೇವಲ ಪದದ ಬಳಕೆ ಬೇಕಾಗಿಲ್ಲ. ನಿಜವಾದ ಪ್ರಬಲ ಲೋಕಪಾಲ್ ಮಸೂದೆ ಬೇಕಾಗಿದೆ. ಭ್ರಷ್ಟಾಚಾರ ಮುಕ್ತ ದೇಶವನ್ನಾಗಿಸಬೇಕು ಎಂಬುದು ನಮ್ಮ ಆಶಯ. ಲೋಕಪಾಲ್ ಪ್ರಬಲಗೊಳಿಸಲು ಯುಪಿಎ ಸರ್ಕಾರ ಯಾವುದೇ ಪರಿಣಾಮಕಾರಿ ನಿಲುವುಗಳನ್ನು ತೆಗೆದು ಕೊಂಡಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಪ್ರಬಲ ಲೋಕಪಾಲ ಮಸೂದೆ ಜಾರಿ ಮಾಡಿದರೆ, ಕೇಂದ್ರ ಸಚಿವ ಸಂಪುಟದಲ್ಲಿರುವ ಅರ್ಧದಷ್ಟು ಸಚಿವರು ಜೈಲು ಸೇರಲಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಪ್ರಬಲ ಲೋಕಪಾಲ್ ಮಸೂದೆ ಜಾರಿ ಮಾಡುತ್ತಿಲ್ಲ ಎಂದು ಆಪಾದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement