ಸಿಬಿಐಗೆ ಸ್ವಾತಂತ್ರ್ಯ ಅಗತ್ಯ: ಬಿಜೆಪಿ
ನವದೆಹಲಿ: ಪರಿಷ್ಕೃತ ಲೋಕಪಾಲ ಮಸೂದೆಗೆ ಕೇಂದ್ರ ಸಂಪುಟದಲ್ಲಿ ಅಂಗೀಕಾರ ದೊರೆತಿದೆಯಾದರು, ಭಾರತೀಯ ಜನತಾ ಪಕ್ಷಾ ಮಸೂದೆಗೆ ವಿರೋಧ ವ್ಯಕ್ತಪಡಿಸಿದೆ.
ಬಿಜೆಪಿ ಸಲಹೆ ಮೇರೆಗೆ ಲೋಕಪಾಲ ಮಸೂದೆಯಲ್ಲಿ ಮಾಡಬೇಕಾದ ಕೆಲವು ತಿದ್ದುಪಡಿಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದು, ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದೆ. ಬಿಜೆಪಿ ನೀಡಿದಂತಹ ಸಲಹೆಗಳನ್ನು ಸ್ವೀಕರಿಸದೆ ಕೇಂದ್ರ ಸರ್ಕಾರ ಲೋಕಪಾಲ ತಿದ್ದುಪಡಿ ಮಸೂದೆ ಮಾಡಿದೆ ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಬಿಐಗಳಿಗೆ ಲೋಕಪಾಲ ಮಸೂದೆಯಡಿಯಲ್ಲಿ ಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಬಿಜೆಪಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿತ್ತು. ಆದರೆ ಕೇಂದ್ರ ಸರ್ಕಾರ ಇದನ್ನು ಕೈಬಿಟ್ಟಿದೆ ಎಂದು ಅವರು ದೂರಿದ್ದಾರೆ.
ಪ್ರಬಲ ಲೋಕಪಾಲ್ ಮಸೂದೆ ಜಾರಿ ಅಗತ್ಯ. ಕೇಂದ್ರ ಸರ್ಕಾರ ಬಿಜೆಪಿ ಮಾಡಿದಂತಹ ಕೆಲ ಸಲಹೆಗಳನ್ನು ಕಡೆಗಣಿಸಿದೆ. ಮುಂದಿನ ಅಧಿವೇಶನದಲ್ಲಿ ಕೇಂದ್ರ ಮಂಡಿಸಲಿರುವ ಮಸೂದೆಯಲ್ಲಿ ಯಾವುದೇ ಉರುಳಿಲ್ಲ ಎಂದು ಅವರು ಹೇಳಿದ್ದಾರೆ.
ಬಿಜೆಪಿ ನೀಡಿದಂತ ಕೆಲವು ಸಲಹೆಗಳು:
-ಸಿಬಿಐ ನಿರ್ದೇಶಕರಿಗೆ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಹಾಗೂ ನಿವೃತ್ತಿ ಹೊಂದಿದ ನಂತರ ಅವರಿಗೆ ಮತ್ತೋಬ್ಬ ನಿರ್ದೇಶಕರನ್ನು ನೇಮಕ ಮಾಡುವ ಅಧಿಕಾರವಿರಬಾರದು.
-ಸಿಬಿಐ ಅಧಿಕಾರಿಗಳನ್ನು ಆಯ್ಕೆ ಮಾಡುವಲ್ಲಿ ಸ್ವಯಾಧಿಕಾರವಿರಬೇಕು.
-ಲೋಕಪಾಲರ ನೇಮಕ ಸರ್ಕಾರದ ನಿಯಂತ್ರಣದಲ್ಲಿರಬಾರದು.