ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಆಶೀಶ್ ನಂದಿ ಬಂಧನಕ್ಕೆ ಸುಪ್ರೀಂ ತಡೆ

Mainashree
Updated On : 1 Feb 2013, 3:51 am

ನವದೆಹಲಿ: ಅರ್ಥಶಾಸ್ತ್ರಜ್ಞ ಆಶೀಶ್ ನಂದಿ ಅವರ ಪೊಲೀಸ್ ಬಂಧನಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.

ಇತ್ತೀಚೆಗಷ್ಟೆ ಬರಹಗಾರ ಹಾಗೂ ಅರ್ಥಶಾಸ್ತ್ರಜ್ಞ ಆಶೀಶ್ ನಂದಿ ಅವರು, ದೇಶದಲ್ಲಿ ಅಪರಾಧಗಳ ಪ್ರಕರಣಗಳು ಹೆಚ್ಚಾಗಲು ದಲಿತರು ಹಾಗೂ ಅಲ್ಪಸಂಖ್ಯಾತರ ನಡುವಳಿಕೆಯೇ ಕಾರಣ ಎಂದು ಹೇಳಿಕೆ ನೀಡಿದ್ದರು.

ಆಶೀಶ್ ನಂದಿ ಅವರು ಬಾಯಿಗೆ ಬಂದಂತೆ ಹೇಳಿಕೆ ನೀಡುವುದನ್ನಾ ಮೊದಲು ನಿಲ್ಲಿಸಬೇಕು. ಅವರು ಇನ್ನೂ ಮುಂದೆ ಇಂತಹ ಹೇಳಿಕೆಯನ್ನಾ ನೀಡಬಾರುದು. ನಂದಿ ಈ ರೀತಿ ಹೇಳಿಕೆ ನೀಡಲು ಕಾನೂನು ಅವರಿಗೆ ಅನುಮತಿ ನೀಡಿಲ್ಲ ಎಂದು ನ್ಯಾಯಪೀಠ ಸೂಚಿಸಿದೆ.

ನಂದಿ ಹೇಳಿಕೆಗೆ ದೇಶದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು, ಅನೇಕ ದಲಿತ ಮತ್ತು ಅಲ್ಪಸಂಖ್ಯಾತರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

ಸಾಹಿತ್ಯ ಹಬ್ಬದದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಆಶೀಶ್ ನಂದಿ ವಿರುದ್ಧ ಎಫ್‌ಐಆರ್ ದಾಖಲಿಸಲು ಕೇಂದ್ರ ಮತ್ತು ರಾಜಸ್ಥಾನದ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಎ.ಆರ್ ಡೇವ್ ಮತ್ತು ವಿಕ್ರಮಾಜಿತ್ ಸೆನ್ ಅವರೊನ್ನೊಳಗೊಂಡ ವಿಭಾಗಿಯ ಪೀಠ, ಆಶೀಶ್ ನಂದಿ ನೀಡಿರುವ ಹೇಳಿಕೆಯ ಮೇಲೆ ಅವರು ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಈ ಸಂಬಂಧ ನಂದಿ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ರಾಜಸ್ಥಾನ, ಬಿಹಾರ್, ಮಹಾರಾಷ್ಟ್ರ, ಮತ್ತು ಚತ್ತೀಸ್‌ಗರ್ ರಾಜ್ಯಗಳಿಗೆ ನೊಟೀಸ್ ಜಾರಿ ಮಾಡಿದೆ.

ಒಬ್ಬ ಲೇಖಕ ತನ್ನ ಅಭಿಪ್ರಾಯ ಹೇಳಿದಾಗ ಆತನನ್ನು ಶಿಕ್ಷಿಸುವ ಅಧಿಕಾರ ನ್ಯಾಯಾಪೀಠಕ್ಕೆ ಇಲ್ಲ ಎಂದು ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement