ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಗ್ಯಾಂಗ್‌ರೇಪ್: ಸೋನಿಯಾ ಭೇಟಿಗೆ ಮುಂದಾದ ಯುವತಿ ಕುಟುಂಬ

Mainashree
Updated On : 2 Feb 2013, 12:40 pm

ನವದೆಹಲಿ: ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಯುವತಿಯ ಪೋಷಕರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.

ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಯುವತಿಯ ತಂದೆ ತಿಳಿಸಿದ್ದಾರೆ.

ಬಾಲಪರಾಧಿ ನ್ಯಾಯಮಂಡಳಿಯಲ್ಲಿ ಆರನೇ ಆರೋಪಿಯನ್ನು ಬಾಲಪರಾಧಿ ಎಂದು ಪರಿಗಣಿಸಲಾದ ನಿರ್ಧಾರದ ಬಗ್ಗೆ ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಆರನೇ ಆರೋಪಿ ಬಾಲಪರಾಧಿಯಾಗಿದ್ದರು ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಯುವತಿಯ ತಂದೆ ಒತ್ತಾಯಿಸಿದ್ದಾರೆ.

ಬಾಲಪರಾಧಿ ನ್ಯಾಯಾಮಂಡಳಿ ಆತನನ್ನು ಬಾಲಪರಾಧಿ ಎಂದು ಪರಿಗಣಿಸಿದರೆ, ಆತನಿಗೆ ಶಿಕ್ಷೆ ಕಡಿಮೆಯಾಗುವುದು ಖಚಿತ. ಆಗ ಅವನು ಶಿಕ್ಷೆ ಮುಕ್ತನಾಗುತ್ತಾನೆ. ಈ ವರ್ಷವೇ ಆತ 18ಕ್ಕೆ ಕಾಲಿಡುವುದರಿಂದ ಆತನಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement