ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನನ್ನ ಭೇಟಿಗೆ ತಡೆ ನೀಡಲು ಪೊಲೀಸರಿಗೆ ಮಮತಾ ಆದೇಶ: ರಶ್ದಿ

Mainashree
Updated On : 1 Feb 2013, 1:59 am

ಕೊಲ್ಕತ್ತಾ: ನನ್ನ ಭೇಟಿಗೆ ತಡೆ ಮಾಡಲು ಪೊಲೀಸರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆದೇಶಿಸಿದ್ದಾರೆ ಎಂದು ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಶುಕ್ರವಾರ ಹೇಳಿದ್ದಾರೆ.

ತಮ್ಮ ದಾರಿಗೆ ತಡೆ ಹಾಕಲು ಮಮತಾ ಬ್ಯಾನರ್ಜಿ ಅವರು ಪೊಲೀಸರಿಗೆ ಸೂಚಿಸಿದ ಹಿನ್ನಲೆಯಲ್ಲಿ ಪೊಲೀಸರು ತಮ್ಮ ಭೇಟಿಯನ್ನು ರದ್ದುಗೊಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ನಿರ್ದೇಶಕಿ ದೀಪಾ ಮೆಹ್ತಾ ಅವರು ರಶ್ದಿ ಅವರ 'ಮಿಡ್ ನೈಟ್ ಚಿಲ್ಡ್ರನ್‌' ಪುಸ್ತಕ ಆಧಾರಿತ ಚಲನಚಿತ್ರವನ್ನು ಹೊರತರುತ್ತಿದ್ದು, ಚಿತ್ರದ ಪ್ರಚಾರಕ್ಕಾಗಿ ಸಲ್ಮಾನ್ ರಶ್ದಿ ಅವರು ಕೊಲ್ಕತ್ತಾಗೆ ಆಗಮಿಸಬೇಕಿತ್ತು. ಆದರೆ ಭದ್ರತಾ ಕೊರತೆಯಿಂದಾಗಿ ಅವರ ಭೇಟಿಯನ್ನು ರದ್ದುಗೊಳಿಸಲಾಗಿತ್ತು.

ರಶ್ದಿ ಅವರು ಕೊಲ್ಕತ್ತಾಗೆ ಆಗಮಿಸುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ, ಕೊಲ್ಕತಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ಆರಂಭಿಸಿದವು. ಏರ್‌ಪೋರ್ಟ್ ಪೊಲೀಸರು ಲೇಖಕ ರಶ್ದಿ ಅವರು ಆಗಮಿಸುತ್ತಿಲ್ಲ ಎಂದು ಹೇಳಿದ ನಂತರ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಿಲ್ಲಿಸಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement