ಪಾಕ್: ಮಸೀದಿ ಬಳಿ ಬಾಂಬ್ ಸ್ಫೋಟ; 19 ಸಾವು
ಕಿಸ್ತಾನದ ಹಂಗು ನಗರದಲ್ಲಿರುವ ಮಸೀದಿಯೊಂದರ ಬಳಿ ಆತ್ಮಾಹುತಿ ದಳ ಬಾಂಬ್ ಸ್ಫೋಟ ನಡೆಸಿದ್ದು, ಈ ಘಟನೆಯಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ
ಪಾಕಿಸ್ತಾನ: ಪಾಕಿಸ್ತಾನದ ಹಂಗು ನಗರದಲ್ಲಿರುವ ಮಸೀದಿಯೊಂದರ ಬಳಿ ಆತ್ಮಾಹುತಿ ದಳ ಬಾಂಬ್ ಸ್ಫೋಟ ನಡೆಸಿದ್ದು, ಈ ಘಟನೆಯಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ. ಅದೇ ವೇಳೆ 45 ಮಂದಿಗೆ ಗಾಯಗಳಾಗಿವೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.
ಪಾಕ್ ಮತ್ತು ಅಫ್ಘಾನಿಸ್ತಾನದ ಗಡಿಪ್ರದೇಶದಲ್ಲಿರುವ ಹಂಗು ಪ್ರದೇಶದಲ್ಲಿ ಶಿಯಾ ಮತ್ತು ಸುನ್ನಿ ಜನಾಂಗದ ನಡುವೆ ಪದೇ ಪದೇ ಸಂಘರ್ಷಗಳು ನಡೆದುಬರುತ್ತಿವೆ. ಇದೀಗ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಸುನ್ನಿ ಜನಾಂಗಕ್ಕೆ ಸೇರಿದ ಜನರೇ ಸಾವನ್ನಪ್ಪಿದ್ದಾರೆ.
ಶುಕ್ರವಾರ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಬರುತ್ತಿದ್ದ ವೇಳೆ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಬಲ್ಲಮೂಲಗಳು ಹೇಳಿವೆ.
ಆದಾಗ್ಯೂ, ಈ ಕೃತ್ಯದ ಹೊಣೆಯನ್ನು ಈವರೆಗ ಯಾವುದೇ ಸಂಘಟನೆಗಳು ಒಪ್ಪಿಕೊಂಡಿಲ್ಲ.