ಜಾರ್ಖಂಡ್: ನಕ್ಸಲ್ ದಾಳಿಗೆ ಪೊಲೀಸರು ಬಲಿ
ಜಾರ್ಖಂಡ್ನ ಪಕೂರ್ ಜಿಲ್ಲೆಯಲ್ಲಿ ಪೊಲೀಸ್ ರಕ್ಷಣಾದಳದ ಮೇಲೆ ನಕ್ಸಲರು ಮಂಗಳವಾರ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ...
ರಾಂಚಿ: ಜಾರ್ಖಂಡ್ನ ಪಕೂರ್ ಜಿಲ್ಲೆಯಲ್ಲಿ ಪೊಲೀಸ್ ರಕ್ಷಣಾದಳದ ಮೇಲೆ ನಕ್ಸಲರು ಮಂಗಳವಾರ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಪೊಲೀಸ್ ಅಧೀಕ್ಷಕ ಮತ್ತು ಓರ್ವ ಪೊಲೀಸ್ ಪೇದೆ ಹತ್ಯೆಗೀಡಾಗಿದ್ದಾರೆ.
ಪಕೂರ್ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಗುರಿಯಾಗಿರಿಸಿ ಮಾವೋವಾದಿಗಳು ಈ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾತಿಕುಂಡ್ ಪ್ರದೇಶದಲ್ಲಿ ಪೊಲೀಸರು ಹಾದುಹೋಗುತ್ತಿದ್ದಾಗ ಮಾವೋವಾದಿಗಳು ಗುಂಡಿನ ಸುರಿಮಳೆಗೈದಿದ್ದಾರೆ.
ಮಾವೋವಾದಿ ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ಈಗಲೂ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.