ನಾಲ್ಕು ಟ್ರಕ್ಗಳಿಂದ ರು. 2,500 ಕೋಟಿ ವಶ
ಆದಾಯ ತೆರಿಗೆ ಇಲಾಖೆ ಮತ್ತು ದೇಶೀಯ ತನಿಖಾ ದಳ ಅಧಿಕಾರಿಗಳು ಸೋಮವಾರ ರಾತ್ರಿ ಮುಂಬೈಯಲ್ಲಿ ನಾಲ್ಕು ಟ್ರಕ್ಗಳಿಂದ ರು. 2,500 ಕೋಟಿ ರು...
ಮುಂಬೈ: ಆದಾಯ ತೆರಿಗೆ ಇಲಾಖೆ ಮತ್ತು ದೇಶೀಯ ತನಿಖಾ ದಳ ಅಧಿಕಾರಿಗಳು ಸೋಮವಾರ ರಾತ್ರಿ ಮುಂಬೈಯಲ್ಲಿ ನಾಲ್ಕು ಟ್ರಕ್ಗಳಿಂದ ರು. 2,500 ಕೋಟಿ ರು, ಚಿನ್ನ ಹಾಗು ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಸ್ತುತ ಪ್ರಕರಣದಲ್ಲಿ 47 ಮಂದಿಗಳನ್ನು ಈಗಾಗಲೇ ಬಂಧಿಸಲಾಗಿದೆ.
ಮುಂಬೈ ಸೆಂಟ್ರಲ್ ರೇಲ್ವೇ ಸ್ಟೇಷನ್ನ ಬಳಿ ಇದ್ದ ನಿಲ್ಲಿಸಲಾಗಿದ್ದ ಟ್ರಕ್ಗಳ ಮೇಲೆ ಸಂಶಯ ಬಂದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಲ್ಲಮೂಲಗಳ ಪ್ರಕಾರ ಪ್ರತಿಯೊಂದು ಟ್ರಕ್ನಲ್ಲಿಯೂ ತಲಾ 15 ಜನರಿದ್ದು ಚಿನ್ನ ಹಾಗು ಹಣದಿಂದ ಕೂಡಿದ 35 ಬ್ಯಾಗ್ಗಳನ್ನು ಹೊಂದಿದ್ದರು ಎನ್ನಲಾಗುತ್ತಿದೆ.
47 ಜನರನ್ನು ಬಂಧಿಸಿದ ಅಧಿಕಾರಿಗಳು, 20 ಜನರನ್ನು ವಿಚಾರಣೆಗೊಳಪಡಿಸಿ ನಂತರ ಮಂಗಳವಾರ ಬೆಳಗ್ಗೆ ವಿಚಾರಣೆ ಮುಕ್ತಗೊಳಿಸಿದ್ದಾರೆ.
ಈಗಾಗಲೇ ಹಣ ತುಂಬಿಸಿದ್ದ 50 ಬ್ಯಾಗ್ಗಳನ್ನು ಪರಿಶೋಧನೆಗೊಳಪಡಿಸಿದ್ದು, ಇನ್ನಿತರ ಬ್ಯಾಗ್ಗಳನ್ನು ಪರಿಶೋಧನೆ ನಡೆಸಬೇಕಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.