ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪ್ರವಾಹ ಪೀಡಿತರಿಗೆ ಸಿಆರ್‌ಪಿಎಫ್‌ನಿಂದ ರು. 18 ಕೋಟಿ ನೆರವು

ಉತ್ತರಾಖಂಡ ಪ್ರವಾಹ ಪೀಡಿತರಿಗೆ ನೆರವು ನೀಡುವ ನಿಟ್ಟಿನಲ್ಲಿ ಸಿಆರ್‌ಪಿಎಫ್ ಯೋಧರು ಮಂಗಳವಾರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಅವರಿಗೆ...

Rashmi Kasaragodu
Updated On : 2 Jul 2013, 4:52 am

ನವದೆಹಲಿ:  ಉತ್ತರಾಖಂಡ ಪ್ರವಾಹ ಪೀಡಿತರಿಗೆ ನೆರವು ನೀಡುವ ನಿಟ್ಟಿನಲ್ಲಿ ಸಿಆರ್‌ಪಿಎಫ್ ಯೋಧರು ಮಂಗಳವಾರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಅವರಿಗೆ ರು. 18 ಕೋಟಿಯ ಚೆಕ್ ಹಸ್ತಾಂತರಿಸಿದ್ದಾರೆ.

ಸಿಆರ್‌ಪಿಎಫ್‌ನ ಯೋಧರು ತಮ್ಮ ಒಂದು ದಿನದ ಸಂಬಳವನ್ನು ಪ್ರವಾಹ ಪೀಡಿತರಿಗೆ ಸಹಾಯಧನವಾಗಿ ನೀಡಿದ್ದಾರೆ.  ಹೀಗೆ ಸಂಗ್ರಹ ಮಾಡಿದ ಒಟ್ಟು ಮೊತ್ತ ರು.18,01,46,637 ಆಗಿದ್ದು ಅದನ್ನು ಸಿಆರ್‌ಪಿಎಫ್ ಮುಖ್ಯಸ್ಥ ಪ್ರಣಯ್ ಸಹಾಯ್ ಶಿಂಧೆ ಅವರಿಗೆ ನೀಡಿದ್ದಾರೆ.

ಪ್ರವಾಹ ಪೀಡಿತರ ಸಹಾಯಕ್ಕಾಗಿ ಸಿಆರ್‌ಪಿಎಫ್ ಎರಡು ಟ್ರಕ್ ಆಹಾರ ಸಾಮಾಗ್ರಿಗಳನ್ನು ಕೂಡಾ ಕಳುಹಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement