ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಭಾರತ ಅನಾಥಾಲಯವಲ್ಲ: ಖುರ್ಷಿದ್

ಅಮೆರಿಕ ಸರ್ಕಾರದಲ್ಲಿನ ಮಾಜಿ ಗುತ್ತಿಗೆದಾರ ಎಡ್ವರ್ಡ್ ಸ್ನೋಡೆನ್ ಭಾರತದಲ್ಲಿ ರಾಜಕೀಯ ಆಶ್ರಯ ಬೇಡಿದ್ದಾರೆ ಎಂಬ ಸುದ್ದಿ ಬಗ್ಗೆ ವಿದೇಶಾಂಗ...

Rashmi Kasaragodu
Updated On : 2 Jul 2013, 2:58 am

ಬ್ರೂನೆ: ಅಮೆರಿಕ ಸರ್ಕಾರದಲ್ಲಿನ ಮಾಜಿ ಗುತ್ತಿಗೆದಾರ ಎಡ್ವರ್ಡ್ ಸ್ನೋಡೆನ್ ಭಾರತದಲ್ಲಿ ರಾಜಕೀಯ ಆಶ್ರಯ ಬೇಡಿದ್ದಾರೆ ಎಂಬ ಸುದ್ದಿ ಬಗ್ಗೆ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್, ಭಾರತ ಅನಾಥಾಲಯವಲ್ಲ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಖುರ್ಷಿದ್, ನನಗೆ ಸ್ನೋಡೆನ್ ಭಾರತದಲ್ಲಿ ರಾಜಕೀಯ ಆಶ್ರಯ ನೀಡಬೇಕೆಂದು ಸಲ್ಲಿಸಿರುವ ವಿನಂತಿ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.

ಸ್ನೋಡೆನ್ ಅವರು ತನಗೆ ರಾಜಕೀಯ ಆಶ್ರಯ ನೀಡಬೇಕೆಂದು ಭಾರತ ಸೇರಿದಂತೆ 20 ದೇಶಗಳಿಗೆ ವಿನಂತಿ ಸಲ್ಲಿಸಿರುವುದರ ಬಗ್ಗೆ ವಿಕಿಲೀಕ್ಸ್  ಬಹಿರಂಗ ಪಡಿಸಿದ ನಂತರ ಖುರ್ಷಿದ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಆದಾಗ್ಯೂ, ಮಾಧ್ಯಮದವರೊಂದಿಗೆ ಈ ಬಗ್ಗೆ ಹೆಚ್ಚಿನ ವಿಷಯಗಳನ್ನು ಮಾತನಾಡಲು ಖುರ್ಷಿದ್ ನಿರಾಕರಿಸಿದ್ದಾರೆ.

ಈ ಹಿಂದೆ ಭಾರತ ಹಲವಾರು ಜನರಿಗೆ ಆಶ್ರಯ ನೀಡಿದೆ. ಆದರೆ ಈಗ ಯಾರಿಗಾದರೂ ಆಶ್ರಯ ನೀಡಬೇಕಾದರೆ ನಾವು ತುಂಬಾ ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.

ಖುರ್ಷಿದ್ ಅವರ ಈ ಹೇಳಿಕೆಯಿಂದಾಗಿ, ಸ್ನೋಡೆನ್ ಅವರ ವಿನಂತಿಯನ್ನು ಭಾರತ ಸ್ವೀಕರಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ.

ಇದೀಗ ಸ್ನೋಡೆನ್ ಅವರು ಮಾಸ್ಕೋ ವಿಮಾನ ನಿಲ್ದಾಣದ ಟ್ರಾನ್ಸಿಟ್ ವಲಯದಲ್ಲಿ ತಂಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement