ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಚುನಾವಣೆಗೆ ರು. 8 ಕೋಟಿ ಖರ್ಚು; ಮುಂಡಾಗೆ ನೋಟಿಸ್

ಕಳೆದ ಲೋಕಸಭಾ ಚುನಾವಣೆಯಲ್ಲಿ ರು. 8 ಕೋಟಿ ಖರ್ಚು ಮಾಡಿದ್ದಕ್ಕಾಗಿ ಬಿಜೆಪಿ ನೇತಾರ ಗೋಪಿನಾಥ್ ಮುಂಡಾ...

Rashmi Kasaragodu
Updated On : 3 Jul 2013, 5:05 am

ನವದೆಹಲಿ/ ಮುಂಬೈ: ಕಳೆದ ಲೋಕಸಭಾ ಚುನಾವಣೆಯಲ್ಲಿ ರು. 8 ಕೋಟಿ ಖರ್ಚು ಮಾಡಿದ್ದಕ್ಕಾಗಿ ಬಿಜೆಪಿ ನೇತಾರ ಗೋಪಿನಾಥ್ ಮುಂಡಾ ಅವರಿಗೆ ಚುನಾವಣಾ ಆಯೋಗ ಬುಧವಾರ ನೋಟಿಸ್ ನೀಡಿದೆ.

ಲೋಕಸಭಾ ಚುನಾವಣೆಯಲ್ಲಿ  ಅಭ್ಯರ್ಥಿಯೊಬ್ಬರು ಖರ್ಚು ಮಾಡುವ ಹಣದ ಮಿತಿ ರು. 25 ಲಕ್ಷ ಆಗಿದೆ.

ಲೋಕಸಭಾ ಉಪ ನಾಯಕರಾಗಿರುವ ಮುಂಡಾ ಕಳೆದ ವಾರ ಮುಂಬೈಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ಬಗ್ಗೆ ಟೀಕೆ ವ್ಯಕ್ತ ಪಡಿಸಿದ ಕಾಂಗ್ರೆಸ್, ಮಹಾರಾಷ್ಟ್ರದ ಬೀಡ್‌ನಿಂದ ಚುನಾವಣೆ ಗೆದ್ದಿರುವ ಮುಂಡಾ ಅವರನ್ನು ಸಂಸತ್‌ನಿಂದ ಅನರ್ಹಗೊಳಿಸಬೇಕೆಂದು ಬೇಡಿಕೆಯೊಡ್ಡಿತ್ತು.

ಆದಾಗ್ಯೂ, ಈ ವಿಷಯದ ಬಗ್ಗೆ ಬಿಜೆಪಿ ಜಾಣಮೌನ ವಹಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement