ಮಳೆಗೆ ತತ್ತರಿಸಿದ ಉತ್ತರಾಖಂಡ: ಉಕ್ಕಿ ಹರಿದ ಗಂಗೆ
ಪ್ರಳಯದಿಂದ ತತ್ತರಿಸಿ ಹೋಗಿದ್ದ ಉತ್ತರಾಖಂಡದಲ್ಲಿ ಬುಧವಾರ ಭಾರೀ ಮಳೆಯಾಗಿದೆ. ಇದರಿಂದಾಗಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಆಹಾರ ಸಾಮಾಗ್ರಿಗಳನ್ನು...
ಡೆಹ್ರಾಡೂನ್: ಪ್ರಳಯದಿಂದ ತತ್ತರಿಸಿ ಹೋಗಿದ್ದ ಉತ್ತರಾಖಂಡದಲ್ಲಿ ಬುಧವಾರ ಭಾರೀ ಮಳೆಯಾಗಿದೆ. ಇದರಿಂದಾಗಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಆಹಾರ ಸಾಮಾಗ್ರಿಗಳನ್ನು ಸಾಗಿಸುವುದು ಕಷ್ಟವಾಗಿದೆ ಎಂದು ಹಿಮಾಲಯ ರಾಜ್ಯ ಸರ್ಕಾರ ಹೇಳಿದೆ.
ಇಲ್ಲಿನ ಗರ್ವಾಲ್ ಮತ್ತು ಕುಮಾವೊ ಪ್ರದೇಶಗಳಲ್ಲಿ ಬುಧವಾರ ಬೆಳಗ್ಗಿನಿಂದ ಭಾರೀ ಮಳೆಯಾಗಿದ್ದು, ಇಲ್ಲಿ ಪರಿಹಾರ ಕಾರ್ಯಗಳು ಮೊಟಕುಗೊಂಡಿವೆ.
ರಾಜ್ಯಾಡಳಿತಾಧಿಕಾರಿಗಳು ಪರಿಸ್ಥಿತಿಯ ಬಗ್ಗೆ ನಿಗಾವಹಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಹೆಚ್ಚಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಪ್ರಸ್ತುತ ಪ್ರದೇಶಗಳಲ್ಲಿ ಮುಂದಿನ 48ರಿಂದ 72 ಗಂಟೆಗಳ ವರೆಗೆ ಇಲ್ಲಿ ಅತಿವೃಷ್ಟಿಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಅದೇ ವೇಳೆ ಉತ್ತರಕಾಶಿ ಮತ್ತು ಜೋಷಿಮತದಲ್ಲಿ ಗಂಗಾ ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಜನರು ನದಿ ದಂಡೆಯಿಂದ ದೂರವಿರುವಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.