ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮುಂಬೈನ ಐತಿಹಾಸಿಕ ಬಲ್ಲಾರ್ಡ್‌ ಕಟ್ಟಡಕ್ಕೆ ಬೆಂಕಿ

ಮುಂಬೈನ ಪಯರ್ ಎಸ್ಟೇಟ್‌ನಲ್ಲಿರುವ ಐತಿಹಾಸಿಕ ಬಲ್ಲಾರ್ಡ್ ಕಟ್ಟಡದಲ್ಲಿ ಬುಧವಾರ ಬೆಳಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ..

Lingaraj Badiger
Updated On : 3 Jul 2013, 1:27 am

ಮುಂಬೈ: ಮುಂಬೈನ ಪಯರ್ ಎಸ್ಟೇಟ್‌ನಲ್ಲಿರುವ ಐತಿಹಾಸಿಕ ಬಲ್ಲಾರ್ಡ್ ಕಟ್ಟಡದಲ್ಲಿ ಬುಧವಾರ ಬೆಳಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ ಕಟ್ಟಡದಲ್ಲಿದ್ದ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಶಾಟ್‌ಸರ್ಕ್ಯೂಟ್‌ನಿಂದ ಕಟ್ಟಡದ ಮೂರನೇ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ನಂತರ ಅದು ಇತರೆ ಮಹಡಿಗಳಿಗೂ ವಿಸ್ತರಿಸಿದೆ. ಸ್ಥಳಕ್ಕೆ 9 ಅಗ್ನಿ ಶಾಮಕ ವಾಹನಗಳು ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.

ಅಗ್ನಿ ಶಾಮಕ ಸಿಬ್ಬಂದಿ ಕಟ್ಟಡದಲ್ಲಿ ಸಿಲುಕಿದ್ದ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಿದ್ದಾರೆ ಮತ್ತು ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ವರದಿಗಳು ತಿಳಿಸಿವೆ. ಆದರೆ ಕಟ್ಟದಲ್ಲಿದ್ದ ಹಲವು ಸರ್ಕಾರಿ ದಾಖಲೆಗಳು ಸುಟ್ಟು ಕರಕಲಾಗಿವೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement